ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ  

ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ   

 

ಬೆಳಗಾವಿ: ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ಡಿಸೆಂಬರ್ 26 ರಂದು ಧಾರವಾಡದ ನವಲೂರು ಬಳಿಯ ಮಯೂರ ಆದಿತ್ಯ ರೆಸಾರ್ಟ್ ನಲ್ಲಿ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದು.

 

 ಶ್ರೀ ಭಗೀರಥ ಪೀಠದ ಪೂಜ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದು, ಉಪ್ಪಾರ ಸಮಾಜದ ರಾಜ್ಯ ಮಟ್ಟದ ಹಿರಿಯರು, ರಾಜಕೀಯ ಮುಖಂಡರು, ಮಹಿಳಾ ನೇತಾರರು ಹಾಗೂ ಯುವಮುಖಂಡರು ಪಾಲ್ಗೊಂಡು ಸಮಾಜದ ಏಳ್ಗೆಯ ಕುರಿತು ಚಿಂತನ-ಮಂಥನ ನಡೆಸಲಿದ್ದಾರೆ. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಆಡಲಿದ್ದಾರೆ.

 

ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ಐದು ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ, ಕಾರ್ಯಾಧ್ಯಕ್ಷ ಭರತ್ ಮೈಲಾರ್, ಪ್ರಧಾನ ಕಾರ್ಯದರ್ಶಿ ಕುಮಾರ್ ಉಪ್ಪಾರ, ಮಹಿಳಾ ಘಟಕದ ಅಧ್ಯಕ್ಷೆ ಜಯಕುಮಾರಿ, ಕೋಶಾಧ್ಯಕ್ಷ ಸುಧೀರ ಉಪ್ಪಾರ, ದಶರಥ ಎಂ.ಆರ್, ರಾಘವೇಂದ್ರ ನೀಲಣ್ಣವರ ಹಾಗೂ ರೇವಣ್ಣ ದುರದುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.