ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಪುನೀತ ರಾಜಕುಮಾರ ಅಭಿಮಾನಿಗಳ ಸಾವು

ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಪುನೀತ ರಾಜಕುಮಾರ ಅಭಿಮಾನಿಗಳ ಸಾವು

 

ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ ಆಕಸ್ಮಿಕ ನಿಧನದಿಂದ ನೊಂದ ಬೆಳಗಾವಿ ಜಿಲ್ಲೆಯ ಇಬ್ಬರು ಅಭಿಮಾನಿಗಳು ಸಾವಿಗೆ ಶರಣಾಗಿದ್ದಾರೆ. ಒಬ್ಬ ಅಭಿಮಾನಿ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದರೆ, ಇನ್ನೊಬ್ಬ ಅಭಿಮಾನಿ ಆಘಾತವನ್ನು ತಾಳಿಕೊಳ್ಳಲಾಗದೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

 

ಅಥಣಿ ಪಟ್ಟಣದಲ್ಲಿ ರಾಹುಲ ಗಾಡಿವಡ್ಡರ (26) ಎನ್ನುವ ಯುವಕ ಪುನೀತ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ, ಅದೇ ದು:ಖದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಹುಲ ಈತ ಪುನೀತ ರಾಜಕುಮಾರ ಕಟ್ಟಾ ಅಭಿಮಾನಿಯಾಗಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

 

ಇನ್ನು ಬೆಳಗಾವಿ ಬಳಿಯ ಶಿಂಧೊಳ್ಳಿಯಲ್ಲಿ ಪರಶುರಾಮ ಹನುಮಂತ ದೇಮಣ್ಣವರ (33) ಎನ್ನುವ ಯುವಕ ಪುನೀತ ಸಾವಿನ ಸುದ್ದಿಯ ಆಘಾತ ತಡೆದುಕೊಳ್ಳಲಾಗದೆ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾರೆ. ಕೂಲಿ ಕಾರ್ಮಿಕನಾಗಿದ್ದ ಪರಶುರಾಮ, ಪುನೀತ ಮತ್ತು ಶಿವರಾಜಕುಮಾರ ಅಭಿಮಾನಿಯಾಗಿದ್ದ.