ಬೆಳಗಾವಿ ಪಾಲಿಕೆ ಚುನಾವಣೆ: 12ಚುನಾವಣಾ ಕಾರ್ಯಾಲಯಗಳ ಸ್ಥಾಪನೆ

ಬೆಳಗಾವಿ ಪಾಲಿಕೆ ಚುನಾವಣೆ: 12ಚುನಾವಣಾ ಕಾರ್ಯಾಲಯಗಳ ಸ್ಥಾಪನೆ


ಬೆಳಗಾವಿ: ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ದಿನಾಂಕವನ್ನು ಘೋಷಿಸಿದ್ದು, ಬೆಳಗಾವಿ ಮಹಾನಗರ ಪಾಲಿಕೆಯ ಕೌನ್ಸಿಲರ್‍ಗಳ ಚುನಾವಣೆಯ ಕಾರ್ಯಕ್ಕಾಗಿ 12 ಚುನಾವಣಾಧಿಕಾರಿಗಳ ಕಾರ್ಯಾಲಯಗಳನ್ನು ಸ್ಥಾಪಿಸಲಾಗಿದೆ.
 
 ಬೆಳಗಾವಿ ಮಹಾನಗರಪಾಲಿಕೆಯ ಕೌನ್ಸಿಲರ್‍ಗಳು ಚುನಾವಣಾ ಕಾರ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿರುವ 12 ಚುನಾವಣಾಧಿಕಾರಿಗಳ ಕಾರ್ಯಾಲಯಗಳಲ್ಲಿ ನಾಮಪತ್ರ ಸಲ್ಲಿಕೆ ಕಾಲಕ್ಕೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಮುಂಜಾಗೃತಾ ಕ್ರಮವಾಗಿ ಚುನಾವಣಾಧಿಕಾರಿಗಳ ಕಾರ್ಯಾಲಯಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಅಗಸ್ಟ್ 18ರಿಂದ 23ರವರೆಗೆ ಪ್ರತಿದಿನ ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಿಷೇಧಾಜ್ಞೆಯನ್ನು ವಿಧಿಸಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಮತ್ತು ಪೊಲೀಸ್ ಆಯುಕ್ತರಾದ ಡಾ. ಕೆ. ತ್ಯಾಗರಾಜನ್ ಆದೇಶವನ್ನು ಹೊರಡಿಸಿದ್ದಾರೆ.
 
 ಆಗಸ್ಟ್ 16 ರಿಂದ 23 ರವರೆಗೆ ನಾಮಪತ್ರಗಳ ಸಲ್ಲಿಕೆ ಮಾಡಲು ಹೆಚ್ಚಿನ ಸಂಖ್ಯೆಯ ಉಮೇದುವಾರರು ಹಾಗೂ ಅವರ ಬೆಂಬಲಿಗರು ಮತ್ತು ಸಾರ್ವಜನಿಕರು ಸೇರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತ ಕ್ರಮವಾಗಿ ಚುನಾವಣಾಧಿಕಾರಿಗಳ ಕಾರ್ಯಾಲಯಗಳ ಸುತ್ತಮುತ್ತಲು 100 ಮೀಟರ್ ವ್ಯಾಪ್ತಿಯಲ್ಲಿ  ನಿಯಮಾನುಸಾರ ನಿಷೇಧಾಜ್ಞೆ ವಿಧಿಸುವಂತೆ  ಆದೇಶವನ್ನು ಹೊರಡಿಸಿರುತ್ತಾರೆ. 

ಚುನಾವಣಾಧಿಕಾರಿಗಳ ಕಾರ್ಯಾಲಯಗಳು : 
1. ಬೆಳಗಾವಿ ಮಹಾನಗರಪಾಲಿಕೆ ವಲಯ ಕಚೇರಿ ಉತ್ತರ-2 ವಿಶ್ವೇಶ್ವರಯ್ಯ ನಗರ ಬೆಳಗಾವಿ, 
2. ಮಹಾನಗರಪಾಲಿಕೆಯ ಕಂದಾಯ ಶಾಖೆಯ ವಲಯ ಕಚೇರಿ ಉತ್ತರ-1 ಕೋನವಾಳ ಗಲ್ಲಿ ಬೆಳಗಾವಿ, 
3. ಮಹಾನಗರಪಾಲಿಕೆಯ ಲೋಕೋಪಯೋಗಿ ಶಾಖೆಯ ವಲಯ ಕಚೇರಿ ಉತ್ತರ-1 ಕೋನವಾಳ ಗಲ್ಲಿ ಬೆಳಗಾವಿ, 
4. ಬೆಳಗಾವಿ ಮಹಾನಗರ ಪಾಲಿಕೆ ಸಮುದಾಯಭವನ ಕೋನವಾಳಗಲ್ಲಿ ಬೆಳಗಾವಿ, 
5. ಬೆಳಗಾವಿ ಮಹಾನಗರ ಪಾಲಿಕೆ ಮುಖ್ಯ ಕಚೇರಿಯಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಶಾಸಕರ ಕೊಠಡಿ, 
6. ಬೆಳಗಾವಿ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಉಪಮಾಪೌರರ ಕೊಠಡಿ, 
7. ಬೆಳಗಾವಿ ಮಹಾನಗರಪಾಲಿಕೆಯ ಕಂದಾಯ ಶಾಖೆಯ ವಲಯ ಕಚೇರಿ ದಕ್ಷಿಣ-1 ಗೋವಾವೆಸ್ ಕಾಂಪ್ಲೆಕ್ಸ್ ಬೆಳಗಾವಿ, 
8. ಮಹಾನಗರಪಾಲಿಕೆಯ ಮುಖ್ಯ ಕಚೇರಿಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರ ಕೊಠಡಿ, 
9. ಮಹಾನಗರಪಾಲಿಕೆಯ ಕಂದಾಯ ಶಾಖೆಯ ವಲಯ ಕಚೇರಿ ದಕ್ಷಿಣ-1 ಗೋವಾವೆಸ್ ಕಾಂಪ್ಲೆಕ್ಸ್ ಬೆಳಗಾವಿ, 
10. ಮಹಾನಗರಪಾಲಿಕೆಯ ಲೋಕೋಪಯೋಗಿ ಶಾಖೆಯ ವಲಯ ಕಚೇರಿ ದಕ್ಷಿಣ-1 ಗೋವಾವೆಸ್ ಕಾಂಪ್ಲೆಕ್ಸ್ ಬೆಳಗಾವಿ, 
11. ಬೆಳಗಾವಿ ಮಹಾನಗರಪಾಲಿಕೆಯ ಕಂದಾಯ ಶಾಖೆಯ ವಲಯ ಕಚೇರಿ ಅಶೋಕ್ ನಗರ ಬೆಳಗಾವಿ, 
12. ಮಹಾನಗರಪಾಲಿಕೆಯ ಲೋಕೋಪಯೋಗಿ ಶಾಖೆಯ ವಲಯ ಕಚೇರಿ ದಕ್ಷಿಣ-2 ಗೋವಾವೆಸ್ ಕಾಂಪ್ಲೆಕ್ಸ್ ಬೆಳಗಾವಿ. 

 ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಕೆ ಕಾಲಕ್ಕೆ ಕೋವಿಡ್-19 ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವುದು, ನಿಷೇಧಾಜ್ಞೆ ಅವಧಿಯಲ್ಲಿ ಚುನಾವಣಾಧಿಕಾರಿಗಳ ಕಾರ್ಯಾಲಯದ 100 ಮೀಟರ್ ಸುತ್ತಳತೆಯಲ್ಲಿ ಉಮೇದುವಾರರು ಚುನಾವಣಾ ಪ್ರಕ್ರಿಯೆ ಅಧಿಕಾರಿ ಸಿಬ್ಬಂದಿಯವರನ್ನು ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. 

 ಚುನಾವಣಾಧಿಕಾರಿಗಳ ಕಾರ್ಯಾಲಯದ ಸುತ್ತಮುತ್ತ ಯಾವುದೇ ಸಭೆ-ಸಮಾರಂಭಗಳು ನಡೆಯದಂತೆ ನಿಷೇಧಾಜ್ಞೆ ವಿಧಿಸಲಾಗಿದೆ. ನಿಷೇಧದ ಅವಧಿಯಲ್ಲಿ ಚುನಾವಣಾಧಿಕಾರಿಗಳ ಕಾರ್ಯಾಲಯದ ಸುತ್ತ 5ಕ್ಕಿಂತಲೂ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
 
 ನಿಷೇಧಾಜ್ಞೆಯ ಅವಧಿಯಲ್ಲಿ ಚುನಾವಣಾಧಿಕಾರಿಗಳ ಕಾರ್ಯಾಲಯಗಳ ಸುತ್ತಲಿನ ಸ್ಥಳದಲ್ಲಿ ಘೋಷಣೆ ಮಾಡುವುದು ಧ್ವನಿವರ್ಧಕಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. 

 ಈ ನಿಷೇಧಾಜ್ಞೆ ಅಂತ್ಯಕ್ರಿಯೆ ಮೆರವಣಿಗೆಗಳಿಗೆ ಮತ್ತು ಇನ್ನಿತರ ಕಾರಣಗಳಿಗೆ ಅನುಮತಿ ಪಡೆದು ತೆಗೆಯಲಾದ ಮೆರವಣಿಗೆಗಳಿಗೆ ಅನ್ವಯಿಸುವುದಿಲ್ಲ. ಸದರಿ ಆಜ್ಞೆಯನ್ನು ಉಲ್ಲಂಘಿಸುವವರ ವಿರುದ್ಧ ಕಲಂ 188 ಭಾರತೀಯ ದಂಡ ಸಂಹಿತೆಯ ಪ್ರಕಾರ ಕಾನೂನು ಕ್ರಮವನ್ನು ಜರಗಿಸಲು ಸಂಬಂಧಪಟ್ಟ  ಪಿ.ಐ  ರವರಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಮತ್ತು ಪೆÇಲೀಸ್ ಆಯುಕ್ತರಾದ ಡಾ. ಕೆ. ತ್ಯಾಗರಾಜನ್ ಆದೇಶವನ್ನು ಹೊರಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.