ರಾಯಬಾಗದಲ್ಲಿ ಕಾನೂನು ಪದವಿ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು  

ರಾಯಬಾಗದಲ್ಲಿ ಕಾನೂನು ಪದವಿ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು   

 

ಬೆಳಗಾವಿ: ರಾಯಬಾಗದ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದಲ್ಲಿ ಐದು ವರ್ಷ ಕಾಲಾವಧಿಗೆ ಬಿಬಿಎ ಎಲ್ಎಲ್ ಬಿ ಕೋರ್ಸು ಓದುತ್ತಿರುವ ವಿದ್ಯಾರ್ಥಿಗಳು, ಇಂದು ನಡೆಯಲಿದ್ದ  2ನೇ ಸೆಮಿಸ್ಟರ ಪರೀಕ್ಷೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

 

ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯವು ಡಿಸೆಂಬರ್ 14 ರಂದು ಧಾರವಾಡ ಉಚ್ಚ ನ್ಯಾಯಾಲಯ ಹೊರಡಿಸಿದರುವ ಆದೇಶದನ್ವಯ ರಾಜ್ಯದಲ್ಲಿ ಮೂರು ವರ್ಷದ ಅವಧಿಯ ಎಲ್ಎಲ್ ಬಿ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳ 2ನೇ ಮತ್ತು 4ನೇ ಸೆಮಿಸ್ಟರಿನ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಹೆಚ್ಚುತ್ತಿರುವ ಕೊರೊನಾ ಕಾರಣದಿಂದಾಗಿ ನ್ಯಾಯಾಲಯವು ಪರೀಕ್ಷೆಗಳನ್ನು ರದ್ದುಪಡಿಸಿದೆ.

 

ಮೂರು ವರ್ಷದ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಪಡಿಸಿದಂತೆಯೇ ಐದು ವರ್ಷದ ಕೋರ್ಸ್ ಪಡೆದಿರುವ ವಿದ್ಯಾರ್ಥಿಗಳ ಪರೀಕ್ಷೆಗಳನ್ನೂ ರದ್ದುಪಡಿಸಬೇಕೆಂದು ಆಗ್ರಹಿಸಿ, ಇಂದು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಈ ರೀತಿಯ ತಾರತಮ್ಯ ಅನ್ಯಾಯಕಾರಕ. ಇದನ್ನು ಮುಂದೆಯೂ ಪ್ರತಿಭಟಿಸುವುದಾಗಿ ಹೇಳಿರುವ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.