ಬೆಳಗಾವಿಯಲ್ಲಿ 'ತಪ್ಪೇನಿದೆ' ಚಿತ್ರದ ಚಿತ್ರೀಕರಣ ಆರಂಭ

ಬೆಳಗಾವಿಯಲ್ಲಿ 'ತಪ್ಪೇನಿದೆ' ಚಿತ್ರದ ಚಿತ್ರೀಕರಣ ಆರಂಭಬೆಳಗಾವಿ : 'ಲೀ ಪ್ರೊಡಕ್ಷನ್ಸ್' ನವರು ನಿರ್ಮಿಸುತ್ತಿರುವ 'ತಪ್ಪೇನಿದೆ'  ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಇಂದು ಬೆಳಗಾವಿಯಲ್ಲಿ ನೆರವೇರಿದ್ದು, ಚಿತ್ರೀಕರಣಕ್ಕೆ ನಿರ್ಮಾಪಕರಾದ ಮುರುಘೇಶ ಶಿವಪೂಜಿ ಮತ್ತು ಬೌಲ್ಡರ್ ಆರ್ ಎಂ ಚೌಗಲೆ ಚಾಲನೆ ನೀಡಿದರು.

 
ಫಿಟ್ಟರ್ ಸುವರ್ಣ ಅವರು ನಿರ್ದೇಶಿಸುತ್ತಿರುವ ನಾಯಕಿ ಪ್ರಧಾನ ಈ ಚಿತ್ರದಲ್ಲಿ ನಾಯಕಿಯಾಗಿ ಮಂಗಳೂರಿನ ಸಲೋಮಿ ಡಿಸೋಜಾ ನಟಿಸುತ್ತಿದ್ದಾರೆ. ಪಿಎಸ್ಸೈ ಪಾತ್ರದಲ್ಲಿ ರಾಜಕುಮಾರ ನಾಯ್ಕ್ ನಟಿಸುತ್ತಿದ್ದಾರೆ. ರಾಜ್ ಎಂ, ಬಸವರಾಜ ವಿ ಐ, ಬಿ ಸಿ ಸಂದೀಪ ಕೂಡ ನಟಿಸುತ್ತಿದ್ದು ಇವರು ಸಹನಿರ್ದೇಶಕರ ತಂಡದಲ್ಲಿಯೂ‌ ಇದ್ದಾರೆ. ಈಶ್ವರಿ ಮತ್ತು ಮಾರುತಿ ಕೂಡ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.
 

ಎ ಆರ್ ಕೃಷ್ಣ ಛಾಯಾಗ್ರಹಣದ ಹೊಣೆಯನ್ನು ಹೊತ್ತಿದ್ದು, ಚಿತ್ರದ ಚಿತ್ರೀಕರಣ ಬೆಳಗಾವಿ ಪರಿಸರದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿದೆ.