ಮನೆ ಕುಸಿತದಿಂದ ಬಡಾಲ ಅಂಕಲಗಿಯಲ್ಲಿ ಏಳು ಮಂದಿ ಸಾವು

ಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿಯಲ್ಲಿ ಭಾರೀ ಮಳೆಯಿಂದ ಮನೆ ಕುಸಿದು ಏಳು ಮಂದಿ ಸಾವಿಗೀಡಾಗಿದ್ದಾರೆ. ಸ್ಥಳದಲ್ಲಿ ಐವರು ಹಾಗೂ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಇಂದು ಸಂಜೆ ಸುರಿದ ಮಳೆಗೆ ಮನೆ ಕುಸಿದಿದೆ. ಮನೆಯಲ್ಲಿದ್ದ ಐವರು ದುರ್ಮರಣ ಹೊಂದಿದ್ದು, ಅವಶೇಷಗಳಡಿ ಸಿಲುಕಿದ್ದ ಮೂವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆ ಪೊಲೀಸರು ದೌಡಾಯಿಸಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. 

 

ಮೃತರನ್ನು ಅರ್ಜುನ ಖನಗಾವಿ, ಸಾತವ್ವ ಖನಗಾವಿ, ಗಂಗವ್ವ ಭೀಮಪ್ಪ ಖನಗಾವಿ, ಸವಿತಾ ಭೀಮಪ್ಪ ಖನಗಾವಿ, ಲಕ್ಷ್ಮಿ ಅರ್ಜುನ ಖನಗಾವಿ, ಪೂಜಾ ಅರ್ಜುನ ಖನಗಾವಿ ಹಾಗೂ ಪಕ್ಕದ ಮನೆಯ ಕಾಶವ್ವ ವಿಠ್ಠಲ ಕೊಲ್ಯಪ್ಪನವರ್ (8) ಎಂದು ಗುರುತಿಸಲಾಗಿದೆ.