ಕೃಷ್ಣ ಜನ್ಮಸ್ಥಳ  ಮಥುರಾದಲ್ಲಿನ್ನು ಮದ್ಯ, ಮಾಂಸ ಮಾರಾಟ ಮಾಡುವಂತಿಲ್ಲ 

ಕೃಷ್ಣ ಜನ್ಮಸ್ಥಳ  ಮಥುರಾದಲ್ಲಿನ್ನು ಮದ್ಯ, ಮಾಂಸ ಮಾರಾಟ ಮಾಡುವಂತಿಲ್ಲ 
 
 

ಲಖನೌ: ಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ಇನ್ನು ಮುಂದೆ ಮದ್ಯ ಮತ್ತು ಮಾಂಸವನ್ನು ಮಾರಾಟ ಮಾಡುವಂತಿಲ್ಲ. ಮದ್ಯ ಮತ್ತು ಮಾಂಸವನ್ನು ಸಂಪೂರ್ಣ ನಿಷೇಧಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ.
ಮಥುರಾದಲ್ಲಿ ಕೃಷ್ಣೋತ್ಸವ - 2021 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಮದ್ಯ ಮತ್ತು ಮಾಂಸದ ವ್ಯಾಪಾರದಲ್ಲಿ ತೊಡಗಿರುವವರು ಮಥುರಾದ ಗತವೈಭವವನ್ನು ಮರುಕಳಿಸುವ ಸಲುವಾಗಿ ಹಾಲಿನ ಮಾರಾಟವನ್ನು ಆರಂಭಿಸಬಹುದು. ಮಥುರಾದಲ್ಲಿ ಹಾಲಿನ ವ್ಯಾಪಾರಕ್ಕೆ ಉತ್ತೇಜನ ನೀಡಲಾಗುವುದು" ಎಂದು ಹೇಳಿದ್ದಾರೆ.