ಸಾಕು ನಾಯಿಗಳಿಗೆ ನಾಳೆ ಬೆಳಗಾವಿಯಲ್ಲಿ ಉಚಿತ ರೆಬೀಸ್ ಲಸಿಕಾ ಕಾರ್ಯಕ್ರಮ

ಸಾಕು ನಾಯಿಗಳಿಗೆ ನಾಳೆ ಬೆಳಗಾವಿಯಲ್ಲಿ ಉಚಿತ ರೆಬೀಸ್ ಲಸಿಕಾ ಕಾರ್ಯಕ್ರಮ
ಬೆಳಗಾವಿ : 2021-22 ನೇ ಸಾಲಿನಲ್ಲಿ " ಆಜಾದಿ ಕಾ ಅಮೃತ ಮಹೋತ್ಸವ" ದಿನದ ಅಂಗವಾಗಿ ಸೆ. 28 ರಂದು ಬೆಳಗಾವಿ ತಾಲೂಕಿನ ಎಲ್ಲ ಶ್ವಾನಗಳಿಗೆ ಉಚಿತ ರೆಬೀಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ವತಿಯಿಂದ ಸೆ. 28 ರಂದು ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ  ವಡಗಾವಿಯ ಪಶು ಚಿಕಿತ್ಸಾಲಯದಲ್ಲಿ ಎಲ್ಲ ಶ್ವಾನಗಳಿಗೆ ಉಚಿತ ರೆಬೀಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲ ಶ್ವಾನ ಪ್ರಿಯರು ತಮ್ಮ ಶ್ವಾನಗಳಿಗೆ ಲಸಿಕೆ ಹಾಕಿಸುವ ಮೂಲಕ ಸದರಿ ರೆಬೀಸ್ ಲಸಿಕಾ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು  ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಅಶೋಕ.ಎಲ್. ಕೊಳ್ಳಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.