ಕ್ರಿಮಿನಾಲಜಿ, ಬಿ.ಎಡ್ ಪರೀಕ್ಷೆಗಳನ್ನು ಮುಂದೂಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ

ಕ್ರಿಮಿನಾಲಜಿ, ಬಿ.ಎಡ್ ಪರೀಕ್ಷೆಗಳನ್ನು ಮುಂದೂಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ

 

 

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಗಳು, ಎಂ.ಸಿ.ಎ ವಿಭಾಗದ ಪರೀಕ್ಷೆಗಳು ಹಾಗೂ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಜರುಗುವ ಸ್ನಾತಕ ಕ್ರಿಮಿನಾಲಜಿ ಪದವಿ ಪರೀಕ್ಷೆಗಳನ್ನು ಸಪ್ಟೆಂಬರ್ 13 ರಿಂದ ಜರುಗಿಸಲು ನಿರ್ಧರಿಸಲಾಗಿತ್ತು. ಅದರಂತೆ ಬಿ.ಎಡ್ ಪರೀಕ್ಷೆಗಳನ್ನು ಸಪ್ಟೆಂಬರ್ 15 ರಿಂದ ಜರುಗಿಸಲು ನಿರ್ಧರಿಸಲಾಗಿತ್ತು.  

 

 

ಸದರಿ ಪರೀಕ್ಷೆಗಳನ್ನು ತಾಂತ್ರಿಕ ಕಾರಣದಿಂದಾಗಿ ಮುಂದೂಡಲಾಗಿದೆ. ಸದರಿ ಎಲ್ಲ ಉಳಿದ ಸ್ನಾತಕೋತ್ತರ ಪರೀಕ್ಷೆಗಳನ್ನು ದಿನಾಂಕ 17 ನೇ ಸಪ್ಟೆಂಬರ್ 2021 ರಿಂದ ಮರು ನಿಗದಿಪಡಿಸಲಾಗಿದೆ. ಅದರಂತೆ, ಬಿ.ಎಡ್ ಪರೀಕ್ಷೆಗಳನ್ನು 20ನೇ ಸಪ್ಟೆಂಬರ್ 2021 ರಿಂದ ಜರುಗಿಸಲು ನಿರ್ಧರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಗಳನ್ನು ಮಹಾವಿದ್ಯಾಲಯಗಳಿಗೆ ಹಾಗೂ ವಿಶ್ವವಿದ್ಯಾಲಯದ ವೆಬಸೈಟ್ ನಲ್ಲಿ ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಸ್.ಎಮ್.ಹುರಕಡ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.