ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ B+  ನ್ಯಾಕ್ ಮಾನ್ಯತೆ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ B+  ನ್ಯಾಕ್ ಮಾನ್ಯತೆ

 

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಪ್ಟೆಂಬರ್ 01 ರಿಂದ ಸಪ್ಟೆಂಬರ್ 03 ರವರೆಗೆ ನ್ಯಾಕ್ ತಂಡವು ಸತತ ಮೂರು ದಿನಗಳಿಂದ ಏಳು ಹಂತಗಳ ವಿಭಿನ್ನ ಮಾನದಂಡಗಳನ್ನು ಮುಂದಿಟ್ಟುಕೊಂಡು ಪರಿಶೀಲನೆಯನ್ನು ಮಾಡಿ ಸಲ್ಲಿಸಿದ ವಿಸ್ತ್ರತ ವರದಿಯನ್ನು ಗಮನಿಸಿ ನ್ಯಾಕ್ ಸಮಿತಿಯು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ B+ ಮಾನ್ಯತೆಯನ್ನು ನೀಡಿದೆ. 

 

 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪ್ರಥಮ ಬಾರಿಗೆ B+ ನ್ಯಾಕ್ ಮಾನ್ಯತೆಯೊಂದಿಗೆ CGPA of 2.56 ಯನ್ನು ಪಡೆದಿರುವುದು ಸಂತಸದ ಸಂಗತಿಯಾಗಿದೆ. ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ನಡೆದಿರುವ ಸಂಶೋಧನೆ, ಅಧ್ಯಾಪನ ಹಾಗೂ ವಿಸ್ತರಣಾ ಚಟುವಟಿಕೆಗಳು, ಬೋಧನೆ ಮುಂತಾದ ಶೈಕ್ಷಣಿಕ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನ್ಯಾಕ್ ಸಮಿತಿಯು ಈ ಮಾನ್ಯತೆಯನ್ನು ನೀಡಿ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದೆ.

 

 

ವಿಶ್ವವಿದ್ಯಾಲಯವು ಪ್ರಥಮ ಪ್ರಯತ್ನದಲ್ಲಿಯೇ B+ ಮಾನ್ಯತೆಯನ್ನು ಪಡೆದಿರುವುದಕ್ಕೆ ಕುಲಪತಿಗಳಾದ    ಪ್ರೊ. ರಾಮಚಂದ್ರ ಗೌಡ, ಇವರು ಹಾಗೂ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಕುಲಸಚಿವರು ಮೌಲ್ಯಮಾಪನರಾದ ಪ್ರೊ. ಎಸ್. ಎಂ. ಹುರಕಡ್ಲಿ ಹಣಕಾಸು ಅಧಿಕಾರಿಗಳಾದ ಪ್ರೊ. ಡಿ. ಎನ್. ಪಾಟೀಲ ಇವರುಗಳು, ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ ಸದಸ್ಯರುಗಳಿಗೆ, ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಂದುವರೆದು, ಐ.ಕ್ಯೂ.ಎ.ಸಿ. ನಿರ್ದೇಶಕರಾದ      ಪ್ರೊ. ಶಿವಾನಂದ ಗೊರನಾಳೆ ಹಾಗೂ ವರದಿಗಳ ಕ್ರೋಢಿಕರಣ ಸಮಿತಿಯ ಅಧ್ಯಕ್ಷರಾದ ಪ್ರೊ. ಆರ್.ಎನ್.ಮನಗೂಳಿ ಅವರಿಗೆ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲ ಸಿಬ್ಬಂದಿಗಳಿಗೆ ವಿಶ್ವವಿದ್ಯಾಲಯದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಗಿದೆ.