ಬೆಳಗಾವಿಯ ಸ್ಮಶಾನದಲ್ಲಿ ಡಿ.6 ರಂದು ರಾಹುಲ‌ ಜಾರಕಿಹೊಳಿ ನೇತೃತ್ವದಲ್ಲಿ ಡಾ.ಅಂಬೇಡ್ಕರ್ ‌ಪರಿನಿರ್ವಾಣ ದಿನ ಆಯೋಜನೆ

ಬೆಳಗಾವಿಯ ಸ್ಮಶಾನದಲ್ಲಿ ಡಿ.6 ರಂದು ರಾಹುಲ‌ ಜಾರಕಿಹೊಳಿ ನೇತೃತ್ವದಲ್ಲಿ ಡಾ.ಅಂಬೇಡ್ಕರ್ ‌ಪರಿನಿರ್ವಾಣ ದಿನ ಆಯೋಜನೆ
ಬೆಳಗಾವಿ : ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ‌ ದಿನದಂದು ಪ್ರತಿ ವರ್ಷ ಇಲ್ಲಿಯ ಸದಾಶಿವ ನಗರದ ಸ್ಮಶಾನಭೂಮಿಯಲ್ಲಿ ಸತೀಶ ಜಾರಕಿಹೊಳಿ‌ ನೇತೃತ್ವದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ‌ ಆಯೋಜಿಸಲಾಗುವ 'ಮೌಢ್ಯ ವಿರೋಧಿ ದಿನ'ವನ್ನು ಈ‌ ಬಾರಿ ಯುವ ನಾಯಕ ರಾಹುಲ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಪ್ರತಿ ವರ್ಷ ಆಯೋಜಿಸಲಾಗುವ 'ಮೌಢ್ಯ ವಿರೋಧಿ ದಿನ'ದ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಈ ಬಾರಿ  ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ  ಜಾರಿಯಲ್ಲಿರುವುದರಿಂದ  ಹಾಗೂ ಕೋವಿಡ್ ನಿಯಮಾವಳಿಯ ಮಿತಿ ಇರುವ ಕಾರಣ, ಅದಕ್ಕೆ ಅನುಗುಣವಾಗಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.
ಡಿ.6ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಗಣ್ಯರು, ಸ್ವಾಮೀಜಿಗಳು ಮತ್ತು ಹಲವಾರು‌ ಬುದ್ಧಿಜೀವಿಗಳು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಸಾರ್ವಜನಿಕರು ಸಂಪೂರ್ಣ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಣೆ ಮಾಡಬಹುದಾಗಿದೆ.
ಡಾ.ಅಂಬೇಡ್ಕರ್ ‌ಅವರ‌ ಆಶಯದಂತೆ ಅವರ ಪರಿನಿರ್ವಾಣ‌ ದಿನದಂದು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಮೌಢ್ಯವನ್ನು ತೊಲಗಿಸಲು ಮಾನವ ಬಂದುತ್ವ ವೇದಿಕೆ ವತಿಯಿಂದ ಸ್ಮಶಾನದಲ್ಲಿ ಪ್ರತಿವರ್ಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅದು ಈ ವರ್ಷವೂ ಮುಂದುವರಿಯಲಿದೆ ಎಂದು ಮಾನವ ಬಂಧುತ್ವ ವೇದಿಕೆ  ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.