ಬೆಳಗಾವಿಯಲ್ಲಿ ಅಧಿವೇಶನ; ಪ್ರತಿಭಟನೆಗೆ ಪೂರ್ವಾನುಮತಿ ಪಡೆಯಲು ಸಲಹೆ  

ಬೆಳಗಾವಿಯಲ್ಲಿ ಅಧಿವೇಶನ; ಪ್ರತಿಭಟನೆಗೆ ಪೂರ್ವಾನುಮತಿ ಪಡೆಯಲು ಸಲಹೆ   

 

ಬೆಳಗಾವಿ: ಬರುವ ಡಿಸೆಂಬರ್ ೧೩ ರಿಂದ ೨೪ ರ ವರೆಗೆ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲ ಅಧಿವೇಶನ ಜರುಗಲಿದ್ದು, ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಇಡೇರಿಕೆಗಾಗಿ ಪ್ರತಿಭಟನೆ ನಡೆಸಲು ಇಚ್ಛಿಸುವ ಸಂಘಟನೆಗಳು ಪೂರ್ವಾನುಮತಿ ಪಡೆಯುವಂತೆ ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಮೊದಲು ಬಂದವರಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಪ್ರತಿಭಟನೆ ನಡೆಸಲು ಇಚ್ಛಿಸುವ ಸಂಘಟನೆಗಳು ತಮ್ಮ ಸಂಘಟನೆಯ ಮುಖ್ಯಸ್ಥರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಲು ಕೋರಲಾಗಿದೆ. ಸಂಘಟನೆಗಳಿಗೆ ಸುವರ್ಣಸೌಧ ಬಳಿಯ ಸುವರ್ಣ ಗಾರ್ಡನ್ ಪಕ್ಕದಲ್ಲಿ ಮತ್ತು ಸಮೀಪದ ಕೊಂಡಸಕೊಪ್ಪದಲ್ಲಿ ನಿಗದಿಪಡಿಸಿದ ಟೆಂಟ್ ಗಳಲ್ಲಿ ಸ್ಥಳಾವಕಾಶ ನೀಡಲಾಗುವುದು.

 

ನಗರ ಪೊಲೀಸ್ ಆಯುಕ್ತರ ಅನುಮತಿ ಇಲ್ಲದೆ ಯಾವುದೇ ರೀತಿಯ ಪ್ರತಿಭಟನೆ ನಡೆಸಲು ಅವಕಾಶ ಇರುವುದಿಲ್ಲ. ಅಲ್ಲದೆ, ಪ್ರತಿಭಟನಾ ಸ್ಥಳದಲ್ಲಿ ಧರಣಿ, ಉಪವಾಸ ಸತ್ಯಾಗ್ರಹ, ರ್ಯಾಲಿ ಇತ್ಯಾದಿಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

 

ಅನುಮತಿ ಪಡೆಯಲು ನಗರ ಪೊಲೀಸ್ ಆಯುಕ್ತರು (ಅಪರಾಧ), ಬೆಳಗಾವಿ ನಗರ, ದೂರವಾಣಿ- ೦೮೩೧-೨೪೭೧೫೭೭, ಮೊಬೈಲ್ ಸಂಖ್ಯೆ- ೯೪೮೦೮೦೪೧೦೯ ಇವರನ್ನು ಸಂಪರ್ಕಿಸಬಹುದು. ಅಲ್ಲದೆ ಪೊಲೀಸ್ ಇನ್ಸಪೆಕ್ಟರ್, ಸಿಸಿಆರ್ಬಿ ವಿಭಾಗ, ಬೆಳಗಾವಿ ನಗರ, ಮೊಬೈಲ್- ೯೪೪೮೧೮೫೮೩೭, ಪೊಲೀಸ್ ಕಂಟ್ರೋಲ್ ರೂಂ, ಬೆಳಗಾವಿ ನಗರ, ದೂರವಾಣಿ – ೦೮೩೧- ೨೪೦೫೨೩೩/ ೨೪೫೨೧೩೧ ಗೆ ಸಂಪರ್ಕಿಸಲು ಕೋರಲಾಗಿದೆ.