ಇನ್ನು ರಾಜ್ಯ ಸರ್ಕಾರದಿಂದಲೇ ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೇಅರ್ ಕಟಿಂಗ್ ಸೆಲೂನ್

0 0

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಜಾತಿ ತಾರತಮ್ಯ ಹೊಗಲಾಡಿಸಲು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ  ಕ್ಷೌರಿಕ ಅಂಗಡಿಗಳನ್ನು ತೆರೆಯಲು ಮುಂದಾಗಿದೆ.

ಇತ್ತೀಚೆಗೆ ದಲಿತರು ಹಾಗೂ ಕೆಲವು ನಿರ್ದಿಷ್ಟ ಸಮುದಾಯಕ್ಕೆ ಗ್ರಾಮೀಣ ಭಾಗಗಳಲ್ಲಿ ಕ್ಷೌರ ಮಾಡಲು ಹಿಂದೇಟು ಹಾಕಿರುವ ಘಟನೆಗಳು ಮರುಕಳಿಸುತ್ತಿವೆ. ಈ ತಾರತಮ್ಯ ಹೋಗಲಾಡಿಸಲು ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ.

ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಕಾರಿಗಳ ಜತೆ ಈಚಗೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ಕೆಲವು ಕಡೆ ಜಾತಿ ಹೆಸರಿನ ಕಾರಣದಿಂದ ಸೇವೆಗಳನ್ನು ಬಹಿಷ್ಕರಿಸುತ್ತಿರುವ ಅಂಶವನ್ನು ಅಕಾರಿಗಳು ಗಮನಕ್ಕೆ ತಂದಿದ್ದರು.

ಜಾತಿ ಅಥವಾ ಇನ್ಯಾವುದೋ ಕಾರಣಕ್ಕಾಗಿ ಕೆಲವು ಕಡೆ ಕ್ಷೌರದ ಸೇವೆಗಳನ್ನು ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಅಂಗಡಿಯವರು ಅವರಿಗೆ ಕ್ಷೌರ ಮಾಡಿದರೆ ಮೇಲ್ಜಾತಿಯವರು ಬರುವುದಿಲ್ಲ. ಹೀಗಾಗಿ ಇದನ್ನು ತಡೆಗಟ್ಟುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.


ಇದನ್ನು ಗಂಭೀರವಾಗಿ ಪರಿಗಣಿಸಿದ ಯಡಿಯೂರಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ವತಿಯಿಂದಲೇ ಅಂಗಡಿಗಳನ್ನು ತೆರೆಯಬೇಕು. ಇಲ್ಲಿ ಹೊರಗುತ್ತಿಗೆ ಇಲ್ಲವೇ ನೇರನೇಮಕಾತಿ ಮಾಡಿಕೊಂಡು ಅವರಿಗೆ ಅಗತ್ಯವಿರುವಷ್ಟು ಇಲಾಖೆ ವತಿಯಿಂದ ತಿಂಗಳ ವೇತನ ನೀಡಬೇಕೆಂದು ಸೂಚನೆ ಕೊಟ್ಟಿದ್ದಾರೆ


Leave a comment