ಮಂತ್ರಿ ಸ್ಥಾನಕ್ಕಾಗಿ ಕೊನೆಯ ಕಸರತ್ತು ಆರಂಭಿಸಿದ ಉಮೇಶ ಕತ್ತಿ

0 6

ಬೆಳಗಾವಿ: ಸಚಿವ ಸ್ಥಾನಕ್ಕಾಗಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರು ಮತ್ತೊಮ್ಮೆ ಲಾಬಿ ಆರಂಭಿಸಿದ್ದು, ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಡ ಹೇರಲು ಆರಂಭಿಸಿದ್ದಾರೆ.

ಸಿಎಂ ನೀಡಿದ ಪಟ್ಟಿಗೆ ಹೈಕಮಾಂಡ ಇನ್ನೂ ಒಪ್ಪಿಗೆ ನೀಡಿಲ್ಲ. ಹೀಗಾಗಿ ಹೋದ ದಾರಿಗೆ ಸುಂಕ ಇಲ್ಲವೆಂಬಂತೆ ಯಡಿಯೂರಪ್ಪ ಅವರು ದೆಹಲಿಯಿಂದ ಬರಿಗೈನಲ್ಲಿ ಮರಳಿ ಬಂದಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವ ಸಂದರ್ಭದಲ್ಲಿಯಾದರೂ ನಡೆಯಬಹುದಾಗಿದ್ದು, ಹೈಕಮಾಂಡಿಗೆ ಸಿಎಂ ನೀಡಿರುವ ಪಟ್ಟಿಯಲ್ಲಿ ಉಮೇಶ ಕತ್ತಿ ಅವರ ಹೆಸರು ಸೇರಿದೆ ಎನ್ನಲಾಗಿದೆ.

ಉಮೇಶ ಕತ್ತಿ ಅವರು ಸಿಎಂ ಯಡಿಯೂರಪ್ಪ ಅವರ ಮೇಲೆ ಒತ್ತಡವನ್ನು ಹಾಕುವುದನ್ನು ಮುಂದುವರಿಸಿದ್ದಾರೆ. ಈ ಹಿಂದೆ ಮೂರು ಬಾರಿ ಉಮೇಶ ಕತ್ತಿ ಹೆಸರನ್ನು ಬಿಜೆಪಿ ಹೈಕಮಾಂಡ್ ಕೊನೆಯ ಹಂತದಲ್ಲಿ ಪಟ್ಟಿಯಿಂದ ಕೈಬಿಟ್ಟಿತ್ತು. ಅದು ಮತ್ತೆ ಪುನರಾವರ್ತನೆ ಆಗದಂತೆ ಉಮೇಶ ಕತ್ತಿ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವ ಸಂಪುಟ ಸೇರಿಕೊಳ್ಳಲು ಕತ್ತಿ ಅವರಿಗೆ ಇದು ಕೊನೆಯ ಅವಕಾಶವಾಗಿದೆ.


Leave a comment