ಸೋಮವಾರ ಮುಖ್ಯಮಂತ್ರಿ ಎದುರು ಬೆಳಗಾವಿ ಪಾಲಿಕೆಯ ಬಿಜೆಪಿ ಕಾರ್ಪೋರೇಟರ್ ಗಳ ಪರೇಡ್

ಸೋಮವಾರ ಮುಖ್ಯಮಂತ್ರಿ ಎದುರು ಬೆಳಗಾವಿ ಪಾಲಿಕೆಯ ಬಿಜೆಪಿ ಕಾರ್ಪೋರೇಟರ್ ಗಳ ಪರೇಡ್

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದು, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಬರುವ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಎದುರು ವಿಧಾನಸೌಧದಲ್ಲಿ ಬಿಜೆಪಿ ಕಾರ್ಪೊರೇಟರ್ ಗಳ ಪರೇಡ್ ನಡೆಯಲಿದೆ.
ಈ ಕುರಿತಂತೆ ಶಾಸಕ ಅಭಯ ಪಾಟೀಲ ಬೆಂಗಳೂರಿನಿಂದ‌ ವಿಡಿಯೋ ಮೂಲಕ ಸಂದೇಶ ಕಳಿಸಿದ್ದಾರೆ. ನಗರದ ಅನೇಕ‌ ಬೇಡಿಕೆಗಳ ಕುರಿತಂತೆ ಸಿಎಂ ಜೊತೆ ಮಾತನಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಅಭಯ ಪಾಟೀಲ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಗಣೇಶೋತ್ಸವವನ್ನು 11 ದಿನ ಆಚರಿಸಲು ಅವಕಾಶ ನೀಡುವ ಬಗ್ಗೆಯೂ ಮುಖ್ಯಮಂತ್ರಿ ಬೊಮ್ಮಾಯಿ‌ ಒಪ್ಪಿಕೊಂಡಿದ್ದಾರೆಂದು ಅಭಯ ಪಾಟೀಲ ತಿಳಿಸಿದ್ದು, ಈ‌ ಬಗ್ಗೆ ಸ್ಥಳೀಯ ಜಿಲ್ಲಾಧಿಕಾರಿ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗಿದೆ.
ನಿನ್ನೆಯಷ್ಟೇ ಬೆಳಗಾವಿಗೆ ಭೇಟಿ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು 11 ದಿನದ ಗಣೇಶೋತ್ಸವಕ್ಕೆ ಅವಕಾಶ ನೀಡುವ ಬೇಡಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಸಂಪೂರ್ಣ ರಾಜ್ಯಕ್ಕೆ ಒಂದೇ ನಿಯಮ ಇರಲಿದೆ. ಬೆಳಗಾವಿಗಾಗಿ ಪ್ರತ್ಯೇಕ ನಿಯಮ‌ ಮಾಡುವುದು ಸಾಧ್ಯವಿಲ್ಲ ಎಂದಿದ್ದರು. ಅಭಯ ಪಾಟೀಲ ಪ್ರಕಾರ ಈ ವಿಷಯದಲ್ಲಿ ಈಗ ಸಿಎಂ‌ ಮಧ್ಯಪ್ರವೇಶಿಸಿದ್ದು, ಬೆಳಗಾವಿಯಲ್ಲಿ 11 ದಿನಗಳ ಗಣೇಶೋತ್ಸವ ನಡೆಯಲಿದೆ ಎಂದು ಹೇಳಿದ್ದಾರೆ.