ಪಾಲಿಕೆ ಚುನಾವಣೆ: ಬೆಳಗಾವಿಯ ಮುಸ್ಲಿಮರು ಬಿಜೆಪಿಗೆ ಓಟು ಹಾಕಲಿ - ಸಚಿವ ಉಮೇಶ ಕತ್ತಿ

ಪಾಲಿಕೆ ಚುನಾವಣೆ: ಬೆಳಗಾವಿಯ ಮುಸ್ಲಿಮರು ಬಿಜೆಪಿಗೆ ಓಟು ಹಾಕಲಿ - ಸಚಿವ ಉಮೇಶ ಕತ್ತಿ

 
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮುಸ್ಲಿಮರು‌ ಬಿಜೆಪಿಗೆ ಓಟು ಹಾಕಿ‌ ಗೆಲ್ಲಿಸಬೇಕು. ಆ ಮೂಲಕ‌ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಚಿವ ಉಮೇಶ ಕತ್ತಿ‌ ಮುಸ್ಲಿಂ ಮತದಾರರಿಗೆ ಕರೆ ನೀಡಿದ್ದಾರೆ.
 
 
 
ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಪಕ್ಷ ಇನ್ನೂ 20 ವರ್ಷ ಅಧಿಕಾರದಲ್ಲಿರುತ್ತದೆ. ಬೆಳಗಾವಿಯ ಅಭಿವೃದ್ಧಿ ಆಗಬೇಕಾದರೆ ಮಹಾನಗರ ಪಾಲಿಕೆಯಲ್ಲೂ 20 ವರ್ಷ ಬಿಜೆಪಿ ಪಕ್ಷ ಅಧಿಕಾರದಲ್ಲಿರಬೇಕು. ಅದಕ್ಕಾಗಿ ಪಾಲಿಕೆಯಲ್ಲಿ 35 ಸ್ಥಾನಗಳನ್ನು ಗೆಲ್ಲಲು ಮುಸ್ಲಿಮರು ಬಿಜೆಪಿಗೆ ಸಹಕರಿಸಬೇಕು 
ಎಂದು ಅಭಿಪ್ರಾಯಪಟ್ಟರು.
ಎಂಇಎಸ್ ಜೊತೆಗೆ ಯಾವುದೇ ಹೊಂದಾಣಿಕೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ‌ ಉಮೇಶ ಕತ್ತಿ, ಕಾಂಗ್ರೆಸ್ ‌ಮತ್ತು‌ ಎಂಇಎಸ್ ಗೆ ಬುದ್ಧಿ‌ ಕಲಿಸಬೇಕಾಗಿದೆ. ಇದೊಂದು ಬಾರಿ ಬಿಜೆಪಿಗೆ ಅವಕಾಶ ಕೊಡಿ. ಐದು ವರ್ಷದಲ್ಲಿ ಅಭಿವೃದ್ಧಿ ಆಗದಿದ್ದರೆ ನಮ್ಮನ್ನು ಮನೆಗೆ ಕಳಿಸಿ ಎಂದರು.
ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಬಿಜೆಪಿಯ ಏಜೆಂಟ್ ಎನ್ನುವ ಆರೋಪಕ್ಕೆ ಉತ್ತರಿಸಿದ ಕತ್ತಿ, ಬಿಜೆಪಿ ಅಭಿವೃದ್ಧಿಯ ಏಜೆಂಟ್ ಎಂದರು. ಎಂಇಎಸ್ ಮತ್ತು ಎಐಎಂಐಎಂ ಧ್ವಜಗಳು ಚುನಾವಣೆ ಬಂದಾಗ ಮಾತ್ರ ಕಾಣಿಸುತ್ತವೆ ಎಂದು ಇದೇ ಸಂದರ್ಭದಲ್ಲಿ ಅವರು ಆರೋಪಿಸಿದರು.