ಬೆಳಗಾವಿಯಲ್ಲಿ ಮೊದಲ ಬಾರಿಗೆ ಭೋವಿ ವಡ್ಡರ ಸಮಾಜದ ವಧು-ವರ ಸಮಾವೇಶ

ಬೆಳಗಾವಿಯಲ್ಲಿ ಮೊದಲ ಬಾರಿಗೆ ಭೋವಿ ವಡ್ಡರ ಸಮಾಜದ ವಧು-ವರ ಸಮಾವೇಶ

 

ಬೆಳಗಾವಿ: ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರದಲ್ಲಿ ಕಿತ್ತೂರು ಕರ್ನಾಟಕ ವಿಭಾಗ ಮಟ್ಟದ ಬೃಹತ್ ವಧು-ವರ ಸಮಾವೇಶವನ್ನು ಭೋವಿ ವಡ್ಡರ ಸಮಾಜದ ವತಿಯಿಂದ ನವೆಂಬರ್ 21 ರಂದು ಆಯೋಜಿಸಲಾಗಿದೆ. ಚೆನ್ನಮ್ಮ ವೃತ್ತದ ಬಳಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಮಾವೇಶ ನಡೆಯಲಿದೆ.  

 

ಸಮಾಜದ ಹಿರಿಯ ಮುಖಂಡ ಅನಿಲ ಮಮದಾಪೂರ ಅವರು ಸಮಾವೇಶ ಉದ್ಘಾಟಿಸಲಿದ್ದು, ಹಿರಿಯ ನ್ಯಾಯವಾದಿ ಸುರೇಂದ್ರ ಉಗಾರೆ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಕೆ.ಎಸ್.ಮಮದಾಪೂರ ಪಾಲ್ಗೊಳ್ಳಲಿದ್ದು, ಪ್ರಮುಖ ಅತಿಥಿಗಳಾಗಿ ಅಥಣಿಯ ಶ್ರೀಶೈಲ ಒಡೆಯರ, ಹುಬ್ಬಳ್ಳಿಯ ಇಂದ್ರಾ ಬಂಕಾಪೂರ, ಸಿಂದಗಿಯ ಸುನಂದಾ ಏಂಪೂರೆ, ಕಿತ್ತೂರಿನ ಮಹಾದೇವಿ ಮನವಡ್ಡರ, ನವಲಗುಂದದ ಲಕ್ಷ್ಮವ್ವಾ ಬಾದಾಮಿ ಹಾಗೂ ಸುವರ್ಣಾ ಗುಂಜಿಕರ ಪಾಲ್ಗೊಳ್ಳಲಿದ್ದಾರೆ.

 

ಬೆಳಿಗ್ಗೆ 10 ಗಂಟೆಯಿಂದ ಸಮಾವೇಶ ಆರಂಭಗೊಳ್ಳಲಿದ್ದು, ಹೆಚ್ಚಿನ ಮಾಹಿತಿಗಾಗಿ ಸುರೇಂದ್ರ ಉಗಾರೆ – 9480438008 ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.