ಕಿತ್ತೂರಿನಲ್ಲಿಂದು ಮೀಸಲಾತಿ‌ ಹೋರಾಟಕ್ಕೆ ಸಂಬಂಧಪಟ್ಟಂತೆ ಮರಾಠಾ ಹಾಲಿ- ಮಾಜಿ ಶಾಸಕರು, ಮುಖಂಡರ ಸಭೆ

ಕಿತ್ತೂರಿನಲ್ಲಿಂದು ಮೀಸಲಾತಿ‌ ಹೋರಾಟಕ್ಕೆ ಸಂಬಂಧಪಟ್ಟಂತೆ ಮರಾಠಾ ಹಾಲಿ- ಮಾಜಿ ಶಾಸಕರು, ಮುಖಂಡರ ಸಭೆ
ಬೆಳಗಾವಿ: 2 ಎ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ  ಲಿಂಗಾಯತ ಸಮುದಾಯ ಸರ್ಕಾರಕ್ಕೆ ಇದೇ ತಿಂಗಳ ಕೊನೆಯವರೆಗೆ ಗಡುವು ನೀಡಿದ ಬೆನ್ನಲ್ಲೇ, ಮರಾಠಾ ಸಮುದಾಯವೂ ಇದೇ‌ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ‌ ಸಜ್ಜಾಗುತ್ತಿದೆ.
ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮರಾಠಾ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಹೋರಾಟ ರೂಪಿಸಲು ಮರಾಠಾ ಮುಖಂಡರೆಲ್ಲ ಕಿತ್ತೂರು ತಾಲೂಕಿನ ಅಂಬಡಗಟ್ಟಿಯಲ್ಲಿ ಇಂದು ಮಧ್ಯಾಹ್ನ ಒಂದೆಡೆ‌ ಸೇರುತ್ತಿದ್ದಾರೆ. 
ಮರಾಠಾ ಶಾಸಕರಾದ ಶ್ರೀಮಂತ ಪಾಟೀಲ, ಅಂಜಲಿ ನಿಂಬಾಳ್ಕರ್, ಅನಿಲ ಲಾಡ್, ಸಂತೋಷ ಲಾಡ್ ಮೊದಲಾದವರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.