ವಾಲ್ಮೀಕಿಯನ್ನು ತಾಲಿಬಾನ್‌ಗೆ ಹೋಲಿಸಿದ್ದ ಉರ್ದು ಕವಿ ರಾಣಾ ವಿರುದ್ಧ ಎಫ್‌ಐಆರ್

ವಾಲ್ಮೀಕಿಯನ್ನು ತಾಲಿಬಾನ್‌ಗೆ ಹೋಲಿಸಿದ್ದ ಉರ್ದು ಕವಿ ರಾಣಾ ವಿರುದ್ಧ ಎಫ್‌ಐಆರ್

ಭೋಪಾಲ್: ರಾಮಾಯಣ ಮಹಾಗ್ರಂಥ ಬರೆದ ಮಹರ್ಷಿ ವಾಲ್ಮೀಕಿಯನ್ನು ತಾಲಿಬಾನಿಗಳಿಗೆ ಹೋಲಿಸಿದ್ದ ಉರ್ದು ಕವಿ ಮುನ್ನಾವರ್ ರಾಣಾ ವಿರುದ್ಧ ಮಧ್ಯಪ್ರದೇಶ ಪೊಲೀಸರು ಎಫ್‍ಐಆರ್ ದಾಖಲು‌ ಮಾಡಿಕೊಂಡಿದ್ದಾರೆ.



ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುನ್ನಾವರ್ ರಾಣಾ, "ರಾಮಾಯಣ ಬರೆಯುವ ಮುನ್ನ ವಾಲ್ಮೀಕಿ ಸಾಮಾನ್ಯ ಡಕಾಯಿತನಾಗಿದ್ದ. ನಂತರ ಆತ ತಾಲಿಬಾನಿಗಳಂತೆ ಬದಲಾದ" ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.



ರಾಣಾ ಅವರ ಈ ಹೇಳಿಕೆ ಹಿಂದೂಗಳು ಅದರಲ್ಲೂ ವಾಲ್ಮೀಕಿ ಜನಾಂಗದವರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಬಿಜೆಪಿ ಎಸ್‌ಸಿ ಘಟಕದ ರಾಜ್ಯ ಕಾರ್ಯದರ್ಶಿ ಸುನೀಲ್ ಮಾಳವಿಯಾ ದೂರು ನೀಡಿದ್ದರು. ಸುನೀಲ್ ಮಾಳವಿಯಾ ಹಾಗೂ ವಾಲ್ಮಿಕಿ ಜನಾಂಗದ ಮುಖಂಡರು ನೀಡಿದ ದೂರಿನ ಆಧಾರದ ಮೇಲೆ ಗುನಾ ಪೊಲೀಸರು ಮುನ್ನಾವರ್ ರಾಣಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.