ಈ ಬಾರಿ ಆನಲೈನ್ ಮೂಲಕವೇ ಅಖಿಲ ಭಾರತ ‌ದಲಿತ ಸಾಹಿತ್ಯ ಸಮ್ಮೇಳನ ; ಭಾಗವಹಿಸಲು ಈಗಲೇ ಹೆಸರು ನೋಂದಾಯಿಸಿ

ಈ ಬಾರಿ ಆನಲೈನ್ ಮೂಲಕವೇ ಅಖಿಲ ಭಾರತ ‌ದಲಿತ ಸಾಹಿತ್ಯ ಸಮ್ಮೇಳನ ; ಭಾಗವಹಿಸಲು ಈಗಲೇ ಹೆಸರು ನೋಂದಾಯಿಸಿ

ಬೆಳಗಾವಿ: ಕೊರೊನಾ ‌ಕಾರಣದಿಂದಾಗಿ ಈ ಬಾರಿ 8ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಆನಲೈನ್ ಮೂಲಕ ನಡೆಸಲು ತೀರ್ಮಾನಿಸಲಾಗಿದ್ದು, ಕೆಲವೇ ದಿನಗಳಲ್ಲಿ ದಿನಾಂಕವನ್ನು ಪ್ರಕಟಿಸಲಾಗುವುದು.
ವಿಶೇಷವೆಂದರೆ ಇದು ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ವರ್ಷವಾಗಿದ್ದು, ಹೀಗಾಗಿ ಸಮ್ಮೇಳನವನ್ನು ಆನಲೈನ್ ಮೂಲಕವಾದರೂ ನಡೆಸಲು ಪರಿಷತ್ತಿನ ರಾಜ್ಯ ಸಮಿತಿ‌ ತೀರ್ಮಾನಿಸಿದೆ.
ಸಮ್ಮೇಳನದಲ್ಲಿ ದಲಿತ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಉದ್ಯೋಗ, ಮೀಸಲಾತಿ ಮೊದಲಾದ ವಿಷಯಗಳ ಮೇಲೆ 15 ರಿಂದ 20 ನಿಮಿಷ ಪ್ರಬಂಧ ಮಂಡಿಸಲು ಅವಕಾಶವಿದೆ. ಕವಿಗೋಷ್ಠಿಯಲ್ಲಿ ಒಂದು ಕವಿತೆ ಓದಬಹುದು.
ಆಸಕ್ತರು ಸಪ್ಟೆಂಬರ್ 20 ರೊಳಗೆ 9448789322 ನಂಬರಿಗೆ ವಾಟ್ಸಾಪ್ ಮಾಡುವ ಮೂಲಕ ಹೆಸರು ನೋಂದಾಯಿಸಬಹುದು. ಭಾಗವಹಿಸಿದವರಿಗೆ ಇ-ಪ್ರಮಾಣಪತ್ರ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.