ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದಿಂದ ವಿವಿಧ ಸಾಲ ಯೋಜನೆಗಳಡಿ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದಿಂದ ವಿವಿಧ ಸಾಲ ಯೋಜನೆಗಳಡಿ ಅರ್ಜಿ ಆಹ್ವಾನ

ಬೆಳಗಾವಿ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃಧ್ಧಿ ನಿಗಮದ ವತಿಯಿಂದ 2021-22ನೇ ಸಾಲಿಗೆ 21 ರಿಂದ 60 ವರ್ಷದೊಳಗಿನ ಅರ್ಹ ಸಫಾಯಿ ಕರ್ಮಚಾರಿ / ಮ್ಯಾನ್ಯೂಯಲ್ ಸ್ಕ್ಯಾವೇಂಜರ್ಸ್ ಮತ್ತು ಅವರ ಅವಲಂಬಿತರರಿಗೆ ಈ ಕೆಳಕಂಡ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ

ಯೋಜನೆಗಳು :

ನೇರ ಸಾಲ ಯೋಜನೆ, ಉದ್ಯಮ ಶೀಲತಾ ಯೋಜನೆ (ಐ.ಎಸ್.ಬಿ), ಪ್ರವಾಸಿ ಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನ ಖರೀದಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ (ಸ್ವ ಸಹಾಯ ಗುಂಪುಗಳಿಗೆ), ಭೂ ಒಡೆತನ ಯೋಜನೆ ಗಳಿಗೆ ಸೆಪ್ಟೆಂಬರ್ 20ರ ವರೆಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. 

  ನಿಗಮದ ವೆಬ್‍ಸೈಟ್ http://www.ksskdc.kar.nic.in ರಲ್ಲಿ ಮೇಲ್ಕಂಡ ಯೋಜನೆಗಳಡಿ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ಹಿಂದೆ ನಿಗಮದ ಯಾವುದೇ ಯೋಜನೆಗಳಡಿ ಸಫಾಯಿ ಕರ್ಮಚಾರಿ / ಮ್ಯಾನ್ಯೂಯಲ್ ಸ್ಕ್ಯಾವೇಂಜರ್ಸ್ ಮತ್ತು ಅವರ ಅವಲಂಬಿತರ ಗರಿಷ್ಠ ರೂ. 1.00 ಲಕ್ಷಕ್ಕಿಂತ ಮೇಲ್ಪಟ್ಟು ಕಳೆದು 03 ವರ್ಷಗಳಲ್ಲಿ ಸವಲತ್ತುಗಳನ್ನು ಪಡೆದವರು ಮತ್ತೊಮ್ಮೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಆದ್ದರಿಂದ ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ವಿರುವುದಿಲ್ಲ.

ಸಾಮಾನ್ಯ ಷರತ್ತುಗಳು:

ಸಫಾಯಿ ಕರ್ಮಚಾರಿ ಮತ್ತು ಪೌರಕಾರ್ಮಿಕರ ವೃತ್ತಿಯಲ್ಲಿ ಕನಿಷ್ಠ 05 ವರ್ಷಗಳವರೆಗೆ ಕಾರ್ಯನಿರ್ವಹಿಸಿದ ಬಗ್ಗೆ ದಾಖಲೆ ಹೊಂದಿರಬೇಕು, ಕನಿಷ್ಠ 21 ವಯಸ್ಸಿವರಾಗಿರಬೇಕು ಮತ್ತು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು, ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿರೂ. 3.00 ಲಕ್ಷ ಮತ್ತು ನಗರ ಪ್ರದೇಶದಲ್ಲಿರೂ. 5.00 ಲಕ್ಷ ಮಿತಿಯಲ್ಲಿರಬೇಕು, ಸಫಾಯಿ ಕರ್ಮಚಾರಿ / ಮ್ಯಾನ್ಯೂಯಲ್ ಸ್ಕ್ಯಾವೇಂಜರ್ಸ್ ಮತ್ತು ಅವರ ಅವಲಂಬಿತರ ಗರಿಷ್ಠ ರೂ. 1.00 ಲಕ್ಷಕ್ಕಿಂತ ಮೇಲ್ಪಟ್ಟು ಸೌಲಭ್ಯವನ್ನು ಕಳೆದು 03 ವರ್ಷಗಳಲ್ಲಿ ಪಡೆದಿರಬಾರದು. 

 ಕನಿಷ್ಠ 10 ನೇ ತರಗತಿ ವಿದ್ಯಾರ್ಹತೆ ಹೊಂದಿರುವವರಿಗೆಆದ್ಯತೆ ನೀಡಲಾಗುವುದು, ಪೌರಕಾರ್ಮಿಕರು / ಗುರುತಿಸಲ್ಪಟ್ಟ ಮ್ಯಾನ್ಯೂಯಲ್ ಸ್ಕ್ಯಾವೇಂಜರ್ಸ್ ಮತ್ತು ಅವರ ಅವಲಂಬಿತರ ಕುಟುಂಬದಲಿ ್ಲಒಬ್ಬರಿಗೆ ಮಾತ್ರ ಸವಲತ್ತು ನೀಡಲಾಗುವುದು.

  ಯೋಜನೆಗಳ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‍ಸೈಟ್‍ಕ್ಕೆ ಭೇಟಿ ನೀಡಿ ಪಡೆಯಬಹುದಾಗಿರುತ್ತದೆ. ಅರ್ಜಿ ಪ್ರತಿ ಹಾಗೂ ಸ್ವೀಕೃತಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃಧ್ಧಿ ನಿಗಮ, ರೂಮ್ ನಂ:123 1ನೇ ಮಹಡಿ ಸುವರ್ಣ ವಿಧಾನಸೌಧ ಹಲಗಾ ಬೆಳಗಾವಿ-20 ವಿಳಾಸದಲ್ಲಿ ಸಲ್ಲಿಸಲು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.