ವಿಧಾನ ಪರಿಷತ್ ಚುನಾವಣೆ; ವಿವೇಕರಾವ ಪಾಟೀಲ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಮಟ್ಟದ ಸಭೆಯಲ್ಲಿ ಒತ್ತಾಯ

ವಿಧಾನ ಪರಿಷತ್ ಚುನಾವಣೆ; ವಿವೇಕರಾವ ಪಾಟೀಲ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಮಟ್ಟದ  ಸಭೆಯಲ್ಲಿ ಒತ್ತಾಯ


ಬೆಳಗಾವಿ: ರಾಯಬಾಗ ಪಟ್ಟಣದಲ್ಲಿ ಇಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಮಟ್ಟದ  ಪದಾಧಿಕಾರಿಗಳ ಹಾಗೂ ಮುಖಂಡರ  ಸಭೆ ಜರುಗಿದ್ದು, ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿದೆ.


ಸಭೆಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ನವೆಂಬರ್ 22ರಂದು ಜರುಗುವ ಕನಕ ಜಯಂತಿಯನ್ನು ಜಿಲ್ಲಾ, ತಾಲೂಕಾ ಹಾಗೂ ಗ್ರಾಮ ಮಟ್ಟದಲ್ಲಿ ಅತೀ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಹಾಗೂ ಕಳೆದ ಬಾರಿ  ವಿಧಾನ ಪರಿಷತ್ತಿಗೆ ಸ್ವತಂತ್ರವಾಗಿ ಆಯ್ಕೆಯಾದ  ವಿವೇಕರಾವ ಪಾಟೀಲ ಅವರಿಗೆ ಬರುವ ವಿಧಾನ ಪರಿಷತ್ ಸದಸ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವಂತೆ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಪಕ್ಷದ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರಿಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಬೆಳಗಾವಿ ಜಿಲ್ಲಾ ಪದಾಧಿಕಾರಿಗಳ ಸಭೆಯ ಮೂಲಕ ಒತ್ತಾಯಿಸಲಾಗುವುದು ಎಂದರು.


ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಮಂಡೆಪ್ಪಾ ತೋಳೆಣ್ಣವರ, ರಾಯಬಾಗ ತಾಲೂಕಾಧ್ಯಕ್ಷ ಶಿವಪುತ್ರ ಹಾಡಕರ, ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಬಂತಿ, ಪ್ರಕಾಶ್ ಢಂಗ, ಸಿದ್ದಪ್ಪಾ ಮರಾಯಿ, ಭರಮಾ ಮಾಚಕನೂರ, ಬಾಬುರಾವ್ ವಾಘ್ಮೋರೆ, ಅಶೋಕ್ ಮೆಟಗುಡ್ಡ, ವಿನಾಯಕ ಬನ್ನಟ್ಟಿ, ನಸಲಾಪೂರೆ, ಸಿದ್ದಲಿಂಗ ದಳವಾಯಿ, ವಿಠ್ಠಲ ಇಟಕನ್ನವರ, ಯಲ್ಲಪ್ಪ ಕುರುಬರ, ಹಣಮಂತ ಉಪ್ಪಾರ, ಪೂಜೇರಿ, ಡಿ.ಡಿ.ಟೋಪಾಜಿ ಹಾಗೂ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.