ಸಾಹಿತ್ಯ ಪರಿಷತ್ ಚುನಾವಣೆ; ಬಸವರಾಜ ಖಾನಪ್ಪನವರ ಅವರಿಗೆ ಬೆಳಗಾವಿ ಕನ್ನಡಪರ ಸಂಘಟನೆಗಳ ಬೆಂಬಲ

ಸಾಹಿತ್ಯ ಪರಿಷತ್ ಚುನಾವಣೆ; ಬಸವರಾಜ ಖಾನಪ್ಪನವರ ಅವರಿಗೆ ಬೆಳಗಾವಿ ಕನ್ನಡಪರ ಸಂಘಟನೆಗಳ ಬೆಂಬಲ


ಬೆಳಗಾವಿ:  ಒಬ್ಬ ಹೋರಾಟಗಾರ ಖಾನಪ್ಪನವರ ಅವರಿಗೆ  ಈ ಬಾರಿ  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ  ಆಯ್ಕೆ ಮಾಡಬೇಕು  ಅಶೋಕ ಚಂದರಗಿ ಮನವಿ ಮಾಡಿದರು.


 ಶನಿವಾರದಂದು ನಗರದ ಹುಕ್ಕೇರಿ ಶ್ರೀ ಮಠದ ಶಾಖಾ ಮಠದ ಆವರಣದಲ್ಲಿ ನಡೆದ ಹುಕ್ಕೇರಿ ಹಿರೇಮಠ , ಬೆಳಗಾವಿ ಶ್ರೀ ಮಠದ ವಾರ್ಷಿಕೋತ್ಸವದ 48 ನೇ ಸುವಿಚಾರ ಚಿಂತನ  ಹಾಗೂ ಕಾರ್ತಿಕ ದೀಪೋತ್ಸವ ಅಂಗವಾಗಿ ರಾಜ್ಯೋತ್ಸವ ಹಾಗೂ ವಿಧಾನ ಮಂಡಳದಲ್ಲಿ ಗೌರವ ಸತ್ಕಾರ ಪಡೆದ ಮಹನೀಯರಿಗೆ ಅಭಿನಂದನಾ  ಹಾಗೂ ಕನ್ನಡ ಪರ ಹೋರಾಟಗಾರರಿಗೆ ಗೌರವ ಸಮರ್ಪಣೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.


ಈಗಾಗಲೇ ಎರೆಡಮ್ಮೂರ ಬಾರಿ ಬೆಳಗಾವಿಯ ಎಲ್ಲಾ ಕನ್ನಡದ ಮನಸುಗಳು ಸೇರಿ ಗೋಕಾಕಿನ ಬಸವರಾಜ ಖಾನಪ್ಪನವರ ಅವರನ್ನು ಬೆಂಬಲಿಸಲು ಒಮ್ಮತದಿಂದ ನಿರ್ಧಾರ ಮಾಡಲಾಗಿದ್ದು, ಜಿಲ್ಲೆಯ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯರು ಬಸವರಾಜ ಖಾನಪ್ಪನವರ ಅವರನ್ನು ಆಯ್ಕೆ ಮಾಡಬೇಕು. ಕನ್ನಡಪರ ಸಂಘಟನೆಗಳ ಕನ್ನಡದ ರಥ ಜಗ್ಗಬೇಕು. ಬೆಳಗಾವಿಯಲ್ಲಿ ಕನ್ನಡದ ರಥ ಎಂದು ನಿಲ್ಲಬಾರದು ಅದನ್ನು ಮುಂದೆ  ನಡೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲಾ ಕನ್ನಡಿಗರ ಮೇಲಿದ ಎಂದು ಹೇಳಿದರು.

 
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಿ .ಎಲ್.ಪಾಟೀಲ ಮತ್ತು ವಿಧಾನ ಮಂಡಳದಲ್ಲಿ  ರಾಜೋತ್ಸವದ ಗೌರವ ಪಡೆದ ಕನ್ನಡ ಕ್ರೀಯಾ ಸಮಿತಿಯ ಅಧ್ಯಕ್ಷರಾಜ  ಅಶೋಕ ಚಂದರಗಿ ಹಾಗೂ ಬೆಳಗಾವಿಯ ಎಲ್ಲಾ ಕನ್ನಡ  ಪರ ಹೋರಾಟಗಾರರನ್ನು ಶ್ರೀ ಮಠದಿಂದ ಸತ್ಕರಿಸಿ, ಗೌರವಿಸಲಾಯಿತು.


ಕಾರ್ಯಕ್ರಮದ  ದಿವ್ಯ ಸಾನಿಧ್ಯವನ್ನು  ಕಿತ್ತೂರು ರಾಜಗುರು ಕಲ್ಮಠದ ಶ್ರೀ ಮಡಿವಾಳ  ರಾಜಯೋಗೇಂದ್ರ ಮಹಾಸ್ವಾಮಿಗಳು  ಮತ್ತು ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆರ್ಶಿವರ್ಚನ ನೀಡಿದರು. 


ಈ ಸಂದರ್ಭದಲ್ಲಿ ಭಜರಂಗಿ ಚಿತ್ರದ ನಟ  ವಜ್ರಗಿರಿ, ಮಹಾದೇವ ತಳವಾರ, ದೀಪಕ ಗುಗಡನಟ್ಟಿ ಉಪಸ್ಥಿತರಿದ್ದರು.