ದೆಹಲಿಯಲ್ಲಿ ಸಿಎಂ ಭೇಟಿಯಾದ ಜಾರಕಿಹೊಳಿ‌ ಬ್ರದರ್ಸ್, ಬೆಂಬಲಿಗ ಶಾಸಕರು

ದೆಹಲಿಯಲ್ಲಿ ಸಿಎಂ ಭೇಟಿಯಾದ ಜಾರಕಿಹೊಳಿ‌ ಬ್ರದರ್ಸ್, ಬೆಂಬಲಿಗ ಶಾಸಕರು

ಬೆಳಗಾವಿ:  ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಅವರ ಬೆಂಬಲಿಗ ಶಾಸಕರಾದಂತಹ‌ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಠಳ್ಳಿ ಬುಧವಾರ ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಮತ್ತು ಮಹೇಶ್ ಕುಮಠಳ್ಳಿ ಅವರಿಗೆ ಸಚಿವ ಸ್ಥಾ‌ನ ನೀಡಬೇಕೆಂದು ಒತ್ತಾಯಿಸಿದರು.
ಸಿಎಂ ಜೊತೆ ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಾಲಚಂದ್ರ ಜಾರಕಿಹೊಳಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಠಳ್ಳಿ ಪಾತ್ರ ಪ್ರಮುಖವಾಗಿದೆ. ಇವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎನ್ನುವುದು ನಮ್ಮ ಹೋರಾಟವಾಗಿದೆ ಎಂದರು.
ಆದರೆ, ಸಿಎಂ ಅಥವಾ ಹೈಕಮಾಂಡ್ ಭೇಟಿಯಾಗಲೆಂದೇ ದೆಹಲಿಗೆ ಬಂದಿಲ್ಲ. ಬೇರೆ ಕೆಲಸದ ನಿಮಿತ್ಯ ದೆಹಲಿಗೆ ಬಂದಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.