ಬೃಹತ್ ಕೈಗಾರಿಕೆ ಸಚಿವ ಮುರುಘೇಶ ನಿರಾಣಿ ಇಂದು ಬೆಳಗಾವಿಯಲ್ಲಿ

ಬೃಹತ್ ಕೈಗಾರಿಕೆ ಸಚಿವ ಮುರುಘೇಶ ನಿರಾಣಿ ಇಂದು ಬೆಳಗಾವಿಯಲ್ಲಿ


ಬೆಳಗಾವಿ: ಬೃಹತ್ ಮತ್ತು ಮಧ್ಯಮ‌ ಕೈಗಾರಿಕೆ ‌ಸಚಿವ ಮುರುಘೇಶ ‌ನಿರಾಣಿ ಅವರು ಇಂದು ಮತ್ತು ನಾಳೆ ಬೆಳಗಾವಿ ‌ನಗರದಲ್ಲಿ ಇರಲಿದ್ದು, ಹಲವಾರು ‌ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಸಚಿವ ನಿರಾಣಿ, 4 ಗಂಟೆಗೆ ಸಾರ್ವಜನಿಕರನ್ನು ಭೇಟಿಯಾಗಲಿದ್ದಾರೆ. ಸಂಜೆ 5 ಕ್ಕೆ ಜಿಲ್ಲೆಯ ಕೈಗಾರಿಕೋದ್ಯಮಿಗಳೊಂದಿಗೆ ಹೊಟೇಲ್ ಯು.ಕೆ.27 ನಲ್ಲಿ ಸಭೆ ನಡೆಸಲಿದ್ದಾರೆ. 
ರಾತ್ರಿ ನಗರದಲ್ಲಿಯೇ ವಾಸ್ತವ್ಯ ಮಾಡಲಿರುವ ಅವರು, ನಾಳೆ‌ ಮುಂಜಾನೆ 8ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.