ನರ್ಸರಿ, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಾಗಬೇಕೇ? ಗುರುಸ್ಥಾನಮ್ ಶಿಕ್ಷಣ ಸಂಸ್ಥೆ ನಿಮಗಾಗಿ ಹಲವಾರು ಕೋರ್ಸ್ ಗಳನ್ನು ಪರಿಚಯಿಸುತ್ತಿದೆ 

ನರ್ಸರಿ, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಾಗಬೇಕೇ? ಗುರುಸ್ಥಾನಮ್ ಶಿಕ್ಷಣ ಸಂಸ್ಥೆ ನಿಮಗಾಗಿ ಹಲವಾರು ಕೋರ್ಸ್ ಗಳನ್ನು ಪರಿಚಯಿಸುತ್ತಿದೆ 

          ತಮ್ಮ ಮಕ್ಕಳಿಗೆ ಬಾಲ್ಯದ ಹಂತದಲ್ಲಿಯೇ ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ ನೀಡಲು ಈಗಿನ ಪೋಷಕರು ಅಪೇಕ್ಷೆ ಪಡುತ್ತಾರೆ. ಆ ಹಿನ್ನೆಲೆಯಲ್ಲಿ ನರ್ಸರಿ ಮತ್ತು ಪೂರ್ವ ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳನ್ನು ಉತ್ತಮವಾಗಿ ನಿಭಾಯಿಸುವ ಕೌಶಲ್ಯ ಮತ್ತು ಸಾಮರ್ಥ್ಯ ಶಿಕ್ಷಕರಲ್ಲಿ ಇರಬೇಕಾಗುತ್ತದೆ. ಮಕ್ಕಳ ಮನಸ್ಥಿತಿಯನ್ನು ಅರಿತು ಅವರೊಂದಿಗೆ ಲೀಲಾಜಾಲವಾಗಿ ಬೆರೆತು ವಿದ್ಯೆಯನ್ನು ಧಾರೆ ಎರೆಯುವುದರ ಜೊತೆಗೆ ಅವರ ನಡುವಳಿಕೆಯನ್ನು ಸಕಾರಾತ್ಮವಾಗಿ ತಿದ್ದಿ ಉತ್ತಮ ಸಂಸ್ಕಾರವನ್ನು ನೀಡಬೇಕಾಗುತ್ತದೆ. 

         ಅಗತ್ಯವಿರುವ ಕೌಶಲ್ಯಗಳನ್ನು ಮತ್ತು ವಿಶೇಷವಾಗಿ ಮಾಂಟೆಸ್ಸರಿ ಶಿಕ್ಷಣ ಪದ್ಧತಿ ಅಳವಡಿಸಿಕೊಂಡಿರುವ ಶಿಕ್ಷಕ - ಶಿಕ್ಷಕಿಯರಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು, ದೊಡ್ಡ ಮತ್ತು ಹೆಸರುವಾಸಿ ಶಾಲೆಗಳ ಆಡಳಿತ ಮಂಡಳಿಗಳು ಇಂತಹವರಿಗೆ ವಿಶೇಷ ಆದ್ಯತೆ ನೀಡಿ ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ. ಮಕ್ಕಳನ್ನು ಸಮರ್ಥವಾಗಿ ನಿಭಾಯಿಸುಲು ವಿಶೇಷ ತರಬೇತಿಯ ಅಗತ್ಯವಿದ್ದು, ಬೆಳಗಾವಿಯ ಗುರು ಏಜ್ಯುಕೇಶನ್ ಸೊಸೈಟಿಯ ಗುರುಸ್ಥಾನಮ್ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಈ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. 

         ಗುರುಸ್ಥಾನಮ್ ನ ನರ್ಸರಿ ಟೀಚರ್ಸ್ ಟ್ರೇನಿಂಗ್ (NTT) ಡಿಪ್ಲೋಮಾ ಕೋರ್ಸ್ ಅಡಿಯಲ್ಲಿ ಮಕ್ಕಳ ಮನೋವಿಜ್ಞಾನ, ಮಕ್ಕಳಿಗೆ ಸೂಚನೆ ನೀಡುವ ವಿಧಾನಗಳು, ಕ್ಲಾಸರೂಂ ಮ್ಯಾನೇಜಮೆಂಟ್, ಅರಿವು ಮೂಡಿಸುವ ತಂತ್ರಗಾರಿಗೆ ಇತ್ಯಾದಿ ಕೌಶಲಗಳನ್ನು ಕಲಿಸಿಕೊಡಲಾಗುತ್ತದೆ. ಮುದ್ದು ಮಕ್ಕಳೊಂದಿಗೆ ಸಂವಹನ ಸಾಧಿಸುವುದು ಹೇಗೆ ಎನ್ನುವ ವಿಷಯದ ಮೇಲೆ ಒತ್ತು ನೀಡಲಾಗುತ್ತದೆ. ಮಕ್ಕಳ ಅಭ್ಯಾಸಗಳು, ನಡುವಳಿಕೆ, ನೈತಿಕತೆಯನ್ನು ತಿದ್ದಲು ಶಿಕ್ಷಕರಾದವರು ಅವರಿಗೆ ರೋಲ್ ಮಾಡಲ್ ಗಳಾಗಬೇಕಾಗುತ್ತದೆ. ಆ ದೆಸೆಯಲ್ಲಿ ಗುರುಸ್ಥಾನಮ್ ನ ಕೋರ್ಸ್ ಗಳು ರಚಿತಗೊಂಡಿವೆ. 

          ಒಂದು ವರ್ಷದ NTT ಡಿಪ್ಲೋಮಾ ಕೋರ್ಸ್ ಪಡೆಯಲು ಅಭ್ಯರ್ಥಿಯು ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. NTT ಕೋರ್ಸ್ ಮಾಡಿದವರಿಗೆ ಇತ್ತೀಚಿನ ದಿನಗಳಲ್ಲಿ ಕೆಲಸದ ಅವಕಾಶಗಳಿವೆ. ನರ್ಸರಿ ಟೀಚರ್, ಶಾಲಾ ಮೇಲ್ವಿಚಾರಕ, ಸಹಾಯಕ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿ, ಡೇ ಕೇಅರ್ ಮ್ಯಾನೇಜಮೆಂಟ್ ಆಗಿ ಕೆಲಸಕ್ಕೆ ಸೇರುವ ಅಥವಾ ಮಹಿಳೆಯರು ಸ್ವಯಂ ಉದ್ಯೋಗ ‌ಆರಂಭಿಸಲು ಅವಕಾಶಗಳು ಇವೆ. 

ಗುರುಸ್ಥಾನಮ್ ನೀಡುವ ಕೋರ್ಸ್ ಗಳ ವಿವರ ಹೀಗಿದೆ:
1.Advanced Diploma in Montessori & Early Childhood Care. Duration-1 Year,  Eligibility: 12th 
2.Diploma in Montessori & Early Childhood Care. Duration -2 Years Eligibility: 10th Duration 
3.Diploma in School Management (DSM). Duration -1 Year, Eligibility: 12th 
4.Diploma in School Counseling. Duration- 6 Months, Eligibility: 12th Duration  
5.Advanced Diploma in Psychological Counseling. Duration – 6 Months,  Eligibility: 2 Years teaching experience after graduation 

       ಆಸಕ್ತ ಅಭ್ಯರ್ಥಿಗಳು ರೆಗ್ಯುಲರ್ ಆಗಿ ಇಲ್ಲವೆ ವಾರಾಂತ್ಯದ ದಿನಗಳಲ್ಲಿ ಕೋರ್ಸ್ ಪಡೆಯಬಹುದು. ಆನ್ ಲೈನ್ ಮೂಲಕವೂ ಮೇಲಿನ ಎಲ್ಲ ಕೋರ್ಸ್ ಗಳನ್ನು ಪಡೆಯಬಹುದಾಗಿದೆ. 

ಗುರುಸ್ಥಾನಮ್ ಬಗ್ಗೆ ಒಂದಿಷ್ಟು: 

        ಗುರು ಏಜ್ಯುಕೇಶನ್ ಸೊಸೈಟಿಯ ಗುರುಸ್ಥಾನಮ್ ಸಂಸ್ಥೆಯು 2018 ರಿಂದ ಬೆಳಗಾವಿಯಲ್ಲಿ ಪ್ಲೇ ಸ್ಕೂಲ್, ಡೇ ಕೇಅರ್, ಟ್ಯೂಷನ್, ಶಾಲಾ ನಂತರದ ಚಟುವಳಿಕೆಗಳೊಂದಿದೆ NTT ಕೋರ್ಸ್ ಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ದೇಶದಾದ್ಯಂತ ಗುರುಸ್ಥಾನಮ್ ನ ಶಾಖೆಗಳಿವೆ. 

        ಬೆಳಗಾವಿಯಲ್ಲಿ ಇದುವರೆಗೆ  ಗುರುಸ್ಥಾನಮ್ NTT ಕೋರ್ಸ್ ನ ಏಳು ಬ್ಯಾಚ್ ಗಳಲ್ಲಿ ವಿದ್ಯಾರ್ಥಿಗಳು ಕೋರ್ಸ್ ಪಡೆದಿದ್ದಾರೆ. ಗುರುಸ್ಥಾನಮ್ ವತಿಯಿಂದ NTT ಕೋರ್ಸ್ ನ ಫ್ರೆಂಚೈಸಿ ನೀಡಲಾಗುತ್ತದೆ. ಗುರುಸ್ಥಾನಮ್ ಗೆ  ಇಂಟರ್ ನ್ಯಾಶನಲ್ ಅಕ್ರೆಡಿಟೇಶನ್ ಆರ್ಗನೈಸೇಶನ್ (IAO) ವತಿಯಿಂದ ಮಾನ್ಯತೆ ದೊರೆತಿದೆ. ಇದರಿಂದಾಗಿ‌ ಅಭ್ಯರ್ಥಿಗಳು ವಿದೇಶಗಳಲ್ಲಿಯೂ ಉದ್ಯೋಗ ಪಡೆಯಬಹುದಾಗಿದೆ. 

          ಸಂಸ್ಥೆಯ ಅಧ್ಯಕ್ಷರು ಆಗಿರುವ ಕವಿತಾ ಕಲ್ಯಾಣಶೆಟ್ಟಿ, ಉಪಾಧ್ಯಕ್ಷರಾಗಿರುವ ಆರತಿ ಉಮರೆ ಮತ್ತು ಕಾರ್ಯದರ್ಶಿ ವಿಜಯ ಪಾಟೀಲ ಅವರ ನೇತೃತ್ವದಲ್ಲಿ ಗುರುಸ್ಥಾನಮ್ ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ. 2019 ರಲ್ಲಿ ಸಂಸ್ಥೆಯು ಅತ್ಯುತ್ತಮ    ಪೂರ್ವ ಪ್ರಾಥಮಿಕ ಶಾಲೆ ಮತ್ತು NTT ಕೇಂದ್ರ ಎಂದು ಇಂಡಿಯನ್ ಐಕಾನ್ ಬಿಜಿನೆಸ್ ಅವಾರ್ಡ್ಸ್ ನಿಂದ ಪ್ರಶಸ್ತಿ ಪಡೆದಿದೆ. ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಜಯ ಪಾಟೀಲ ಅವರು ಹಿಂದಿ ಚಿತ್ರರಂಗದ ಖ್ಯಾತ ತಾರೆಗಳಾದ ಭಾಗ್ಯಶ್ರೀ ಹಾಗೂ ತನಾಜ್ ಇರಾನಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿರುತ್ತಾರೆ. ಜೊತೆಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 10ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಸಂಸ್ಥೆಯು ಭಾಜನವಾಗಿದೆ. ಇದು ಸಂಸ್ಥೆಯು ನೀಡುತ್ತಿರುವ ಗುಣಮಟ್ಟದ ಸೇವೆ ಮತ್ತು ಗಳಿಸಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.

 

ಮಹಿಳಾ ಸಬಲೀಕರಣ: 

        ನರ್ಸರಿ ಮತ್ತು ಪೂರ್ವ ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳನ್ನು ನಿಭಾಯಿಸಲು ವಿಶೇಷವಾಗಿ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಗುರುಸ್ಥಾನಮ್ ನೀಡುವಂತಹ NTT ಕೋರ್ಸ್ ಗಳು ನಗರಗಳಲ್ಲಿ ಮಾತ್ರ ಲಭ್ಯವಿವೆ. ಅದರಲ್ಲಿಯೂ ಮೊಂಟೆಸ್ಸರಿ ವಿಧಾನಗಳನ್ನು ಅಳವಡಿಸಿಕೊಂಡು, ಮಕ್ಕಳಿಗೆ ಸುಲಭವಾಗಿ ಹಾಗೂ ಸರಳವಾಗಿ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚಿನ ವಿದ್ಯೆಯನ್ನು ನೀಡುವ ಶಿಕ್ಷಕರನ್ನು ತಯಾರು ಮಾಡುವ NTT ಕೇಂದ್ರಗಳು ಇನ್ನೂ ಕಡಿಮೆ. ಹೀಗಾಗಿ ಗ್ರಾಮೀಣ ಭಾಗದ ಮಹಿಳೆಯರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. 

         ಈ ಕೊರತೆಯನ್ನು ನೀಗಿಸಲು ಗುರುಸ್ಥಾನಮ್ ಸಂಸ್ಥೆಯು ಗ್ರಾಮೀಣ ಭಾಗದ ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಹಾಗೂ ಅಗತ್ಯವಿರುವ ಮಾಂಟೆಸ್ಸರಿ ತರಬೇತಿಯನ್ನು ವಿಶೇಷವಾಗಿ ಮಹಿಳಾ ಅಭ್ಯರ್ಥಿಗಳಿಗೆ ನೀಡಲು ಮುಂದಾಗಿದೆ. ಆಸಕ್ತಿಯುಳ್ಳ ಶಾಲೆಗಳು NTT ಕೋರ್ಸ್ ಗಾಗಿ ಗುರುಸ್ಥಾನಮ್ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ. ಈ ಮೂಲಕ ಗುರುಸ್ಥಾನಮ್ ಸಂಸ್ಥೆ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದೆ.

ADDRESS
Sangameshwar Nagar (Azam Nagar)
Plot No. 27, Near Dr Babu Jagjivan Ram Park, Basavanna Temple Circle,
Sangameshwar Nagar (Azam Nagar), BELAGAVI - 590010, Mobile No - 8431114041