ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಖಾಲಿ ಇರುವ 444 ಶಿಕ್ಷಕರ ಹುದ್ದೆಗಳನ್ನು ‌ಭರ್ತಿ ಮಾಡಲು ಸರ್ಕಾರದ ಅನುಮೋದನೆ

ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಖಾಲಿ ಇರುವ 444 ಶಿಕ್ಷಕರ ಹುದ್ದೆಗಳನ್ನು ‌ಭರ್ತಿ ಮಾಡಲು ಸರ್ಕಾರದ ಅನುಮೋದನೆ

ಬೆಳಗಾವಿ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಖಾಲಿ ಇರುವ ಒಟ್ಟು ‌444 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವ ಕುರಿತಂತೆ ಅಧಿಸೂಚನೆ ಹೊರಡಿಸಲು ಸರ್ಕಾರ ಅನುಮೋದನೆ ನೀಡಿದೆ.

ಅದರಂತೆ ವಾಲ್ಮೀಕಿ ಆಶ್ರಮ ಶಾಲೆ ಶಿಕ್ಷಕರ (1 ರಿಂದ 5 ನೇ ತರಗತಿ) ಹುದ್ದೆಗಳನ್ನು ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು.