ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಬೆಳಗಾವಿ ಜಿಲ್ಲೆಯಲ್ಲೊಂದು ಹೇಯ ಕೃತ್ಯ

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಬೆಳಗಾವಿ ಜಿಲ್ಲೆಯಲ್ಲೊಂದು ಹೇಯ ಕೃತ್ಯ


ಬೆಳಗಾವಿ: ಮೈಸೂರಿನಲ್ಲಿ ‌ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿರುವಾಗಲೇ, ಅಂತಹುದೇ ಘೋರ ಕೃತ್ಯವೊಂದು‌ ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
20 ದಿನಗಳ‌ ಹಿಂದೆ ಹೇಯ ಕೃತ್ಯ ನಡೆದಿದೆ‌ ಎನ್ನಲಾಗಿದ್ದು, ನಿನ್ನೆ ಬಾಲಕಿಯ ಪೋಷಕರು ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ವಿಶೇಷ ತನಿಖಾ‌ ತಂಡ ರಚಿಸಿ ನಾಲ್ವರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
15 ವರ್ಷದ ಬಾಲಕಿ ಕೆಲಸಕ್ಕೆಂದು ಹೊಲಕ್ಕೆ ಹೋದಾಗ ಕಾಮುಕರು ಕೃತ್ಯ ಎಸಗಿದ್ದಾರೆಂದು ಹೇಳಲಾಗಿದೆ. ಬಡವರ್ಗದವರಾದ ಬಾಲಕಿಯ ಪೋಷಕರು ಮಾನಕ್ಕೆ ಅಂಜಿ ದೂರು ದಾಖಲಿಸಿರಲಿಲ್ಲ. ಆದರೆ ಕಾಮುಕರು ಮತ್ತೆ ತಮ್ಮ ಮಗಳಿಗೆ ತೊಂದರೆ ಕೊಡಬಹುದು ಎನ್ನುವ ಕಾರಣದಿಂದ ನಿನ್ನೆ ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.