ದಿ ತೇಜಸ್ವಿನಿ ನಾಯಿಕವಾಡಿ ಅವರ ಅಕಾಲಿಕ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ : ಪ್ರಕಾಶ ಹುಕ್ಕೇರಿ

ದಿ ತೇಜಸ್ವಿನಿ ನಾಯಿಕವಾಡಿ ಅವರ ಅಕಾಲಿಕ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ : ಪ್ರಕಾಶ ಹುಕ್ಕೇರಿ
 ರಾಯಬಾಗ:  ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ತೇಜಸ್ವಿನಿ ಅರ್ಜುನ ನಾಯಿಕವಾಡಿ ಅವರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಚಿಕ್ಕೋಡಿ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಹೇಳಿದರು.
ಸೋಮವಾರ ರಾಯಬಾಗ ತಾಲೂಕಿನ‌ ಕಂಕಣವಾಡಿಯಲ್ಲಿ, ಮೃತ ತೇಜಸ್ವಿನಿ ಅವರ ಸಮಾಧಿಗೆ ಭೇಟಿ ನೀಡಿ, ಬಳಿಕ ಅವರ
 ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ತೇಜಸ್ವಿನಿ ಅವರ ಸ್ಮರಣಾರ್ಥ ಒಂದು ಸಮುದಾಯ ಭವನವನ್ನು ಮಂಜೂರು ಮಾಡಲು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು 
 ಈ ಸಂದರ್ಭದಲ್ಲಿ ರಾಜಕೀಯ ಮುಖಂಡ ಮತ್ತು ದಿ.ತೇಜಸ್ವಿನಿ ಅವರ ಪತಿ ಅರ್ಜುನ ನಾಯಿಕವಾಡಿ, ಸಿದ್ದಪ್ಪ ನಾಯಿಕವಾಡಿ,ಋತರ ಪಂಡಿತ್ ಶೆಟ್ಟಿ, ಮಾರುತಿ ಹರಿಜನ, ಸಿದ್ದಪ್ಪ ಹಿರೇಹೊಳಿ, ಸಚಿನ್ ನಾಯಿಕವಾಡಿ ಹಾಗೂ ಇನ್ನಿತರರು ಹಾಜರಿದ್ದರು