ಹುಕ್ಕೇರಿಯಲ್ಲಿ ಹೃದಯವಿದ್ರಾವಕ ಘಟನೆ; ನಾಲ್ಕು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡ ತಂದೆ


ಬೆಳಗಾವಿ: ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ನಾಲ್ಕು ಮಕ್ಕಳಿಗೆ ವಿಷವುಣಿಸಿದ ತಂದೆ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಘಟನೆಯಲ್ಲಿ ವಿಷ ಸೇವಿಸಿದ ಐವರೂ ಸಾವಿಗೆ ಶರಣಾಗಿದ್ದಾರೆ. ಸಾವಿಗೀಡಾದವರನ್ನು ಗೋಪಾಲ ಹಾದಿಮನಿ (46) ಹಾಗೂ ಆತನ ಮಕ್ಕಳಾದ ಶ್ವೇತಾ (16), ಸೃಜನ್  (8), ಸೌಮ್ಯ (19) ಮತ್ತು ಸಾಕ್ಷಿ (9) ಎಂದು ಗುರುತಿಸಲಾಗಿದೆ.
ಮೃತ ಗೋಪಾಲ ಹಾದಿಮನಿ ಪತ್ನಿ ಜಯಾ ಅವರು ಜುಲೈ 6 ರಂದು ಬ್ಲ್ಯಾಕ್ ಫಂಗಸ್ ನಿಂದ ಮೃತಪಟ್ಟಿದ್ದರು. ಅದರಿಂದ ಕುಟುಂಬ ಆಘಾತಕ್ಕೆ ಒಳಗಾಗಿತ್ತು ಎನ್ನಲಾಗಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.