ಶಾಲಾರಂಭ; ಎಲ್ಲ ಬಿಇಓ ಕಚೇರಿಗಳಲ್ಲಿ ‌ಶಿಕ್ಷಕರಿಗೆ‌ ವ್ಯಾಕ್ಸಿನ್

ಶಾಲಾರಂಭ; ಎಲ್ಲ ಬಿಇಓ ಕಚೇರಿಗಳಲ್ಲಿ ‌ಶಿಕ್ಷಕರಿಗೆ‌ ವ್ಯಾಕ್ಸಿನ್

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ರಿಂದ ಶಾಲಾ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ಆಗಸ್ಟ್ 23ರ ಒಳಗೆ ರಾಜ್ಯದ ಎಲ್ಲಾ ಶಿಕ್ಷಕರಿಗೆ ಬಿಇಓ ಕಚೇರಿಗಳಲ್ಲಿ ವ್ಯಾಕ್ಸಿನ್ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ.

ಈ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್  ಬೆಂಗಳೂರಿನಲ್ಲಿ ಹೇಳಿದ್ದಾರೆ. ತಜ್ಣರ ಅಭಿಪ್ರಾಯ ಪಡೆದುಕೊಂಡೇ ಶಾಲಾ ಆರಂಭ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

"ಮುಂದಿನ ದಿನಗಳಲ್ಲಿ ಕೊರೊನಾ ಜೀವನದ ಒಂದು ಭಾಗ ಆಗುತ್ತದೆ. ಹೀಗಾಗಿ ಅದರ ಜೊತೆಗೇ ಬದುಕು ಕಲಿಯಬೇಕು. ಕಳೆದ ಒಂದೂವರೆ ವರ್ಷದಿಂದ ಮಕ್ಕಳ ಶಿಕ್ಷಣ ಹೋಗಿರುವುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ತಜ್ಞರ ಅಭಿಪ್ರಾಯ ಪಡೆದು 9,10,11,12 ನೇ ತರಗತಿಗಳನ್ನು ಪ್ರಾರಂಭ ಮಾಡುತ್ತಿದ್ದೇವೆ. ಹಾಗಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ" ಎಂದು ಸಚಿವರು ಹೇಳಿದ್ದಾರೆ.