ಸಮಾಜಮುಖಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಬೆಳಗಾವಿಯ ವೈದ್ಯ ಡಾ.ಗಿರೀಶ ಸೋನವಾಲ್ಕರ

ಸಮಾಜಮುಖಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಬೆಳಗಾವಿಯ ವೈದ್ಯ ಡಾ.ಗಿರೀಶ ಸೋನವಾಲ್ಕರ

ಬೆಳಗಾವಿ: ಸಮಾಜಸೇವೆಯ ಜೊತೆಗೆ ತಮ್ಮ ಮಾತಿನಿಂದಲೇ ಜನರ ಹೃದಯಗಳನ್ನು ಗೆಲ್ಲುವ ಬೆಳಗಾವಿಯ ಖ್ಯಾತ ವೈದ್ಯ ಹಾಗೂ ಲೇಕವ್ಯೂ ಆಸ್ಪತ್ರೆ ನಿರ್ದೇಶಕ ಡಾ.ಗಿರೀಶ ಸೋನವಾಲ್ಕರ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಠವಾಗಿ ಮತ್ತು ಸಮಾಜಮುಖಿಯಾಗಿ ರಕ್ತದಾನ ಮಾಡುವ ಆಚರಿಸಿಕೊಂಡರು. 


ಕಾಕತಾಳೀಯವೆಂಬಂತೆ  ಇಂದು‌ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವೂ ಇರುವುದರಿಂದ ಎರಡೂ ಕಾರ್ಯಕ್ರಮಗಳನ್ನು ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ರಕ್ತದಾನ ಶಿಬಿರವನ್ನು ಮಹಾಂತೇಶ ನಗರದ ಸರ್ಕಾರಿ ‌ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವನ್ನು ದಿ.ಕೆ.ಹೆಚ್.ಸೋನವಾಲ್ಕರ ಫೌಂಡೇಶನ್ ಅಡಿಯಲ್ಲಿ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳ ಉಚಿತ ಅನಿಮಿಯಾ ಸ್ಕ್ರೀನಿಂಗ್ ಟೆಸ್ಟ್ ಕೂಡ ನಡೆಸಲಾಯಿತು.
ಸಂಸದೆ ಮಂಗಲಾ ಅಂಗಡಿ ಶಿಬಿರವನ್ನು ‌ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಡಾ.ಗಿರೀಶ ಸೋನವಾಲ್ಕರ್ ಹಾಗೂ ಲೇಕವ್ಯೂ ಆಸ್ಪತ್ರೆ ತಂಡವು ಕೋವಿಡ್ ಸಮಯದಲ್ಲಿ ಮಾಡಿದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಅನಿಲ ಬೆನಕೆ‌ ಕೂಡ ಉಪಸ್ಥಿತರಿದ್ದು, ಡಾ.ಸೋನವಾಲ್ಕರ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಗಿರೀಶ ‌ಸೋನವಾಲ್ಕರ್ ಅವರು, ದಿ.ಸುರೇಶ ಅಂಗಡಿ ಅವರ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದರು. ಸಂಸದೆ ಮಂಗಲಾ ಅಂಗಡಿ ಮತ್ತು ಶಾಸಕ ಬೆನಕೆ ಅವರ ಹಮ್ಮಿಕೊಳ್ಳುತ್ತಿರುವ ಕಾರ್ಯಗಳ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದರು.
ಡಾ.ಶಶಿಕಾಂತ ಕುಲಗೋಡ, ಡಾ.ಶ್ವೇತಾ ಸೋನವಾಲ್ಕರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.