ಮಂಗಳವಾರ ಬೆಳಗಾವಿಯ ಸುವರ್ಣಸೌಧದಲ್ಲಿ ಸಕ್ಕರೆ ಕಾರ್ಖಾನೆ‌ ಕಾರ್ಮಿಕರ ವೇತನ ಪರಿಷ್ಕರಣೆ ಕುರಿತ ಮಹತ್ವದ ಸಭೆ

ಮಂಗಳವಾರ ಬೆಳಗಾವಿಯ ಸುವರ್ಣಸೌಧದಲ್ಲಿ ಸಕ್ಕರೆ ಕಾರ್ಖಾನೆ‌ ಕಾರ್ಮಿಕರ ವೇತನ ಪರಿಷ್ಕರಣೆ ಕುರಿತ ಮಹತ್ವದ ಸಭೆ

ಬೆಳಗಾವಿ: ಸಕ್ಕರೆ ಕಾರ್ಖಾನೆಗಳಲ್ಲಿ ಕೆಲ‌ಸ ನಿರ್ವಹಿಸುವ ಕಾರ್ಮಿಕರ‌ ವೇತನ ಪರಿಷ್ಕರಣೆ ಕುರಿತಂತೆ ಚರ್ಚೆ ನಡೆಸಲು ಬರುವ ಸಪ್ಟೆಂಬರ್ 28 ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಸಭೆ ಕರೆಯಲಾಗಿದೆ.


ತ್ರಿಪಕ್ಷೀಯ ವೇತನ ಸಮಿತಿಯ ಜಂಟಿ ಕಾರ್ಮಿಕ ಆಯುಕ್ತರು ಈ ಕುರಿತಂತೆ ಸುತ್ತೋಲೆ‌ ಹೊರಡಿಸಿದ್ದಾರೆ. ಸಭೆಯಲ್ಲಿ ಸಕ್ಕರೆ ಹಾಗೂ ಜವಳಿ ಮತ್ತು ಕೈಮಗ್ಗ ಸಚಿವ ಶಂಕರ‌ ಬಿ ಪಾಟೀಲ ಮುನೇನಕೊಪ್ಪ ಭಾಗವಹಿಸಲಿದ್ದಾರೆ.
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಭೆಗೆ ತ್ರಿಪಕ್ಷೀಯ ವೇತನ ಸಮಿತಿ ಸದಸ್ಯರು ‌ಭಾಗವಹಿಸಿ‌ ಸಲಹೆಗಳನ್ನು ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.