ಬೆಳಗಾವಿ ಪಾಲಿಕೆ ಚುನಾವಣೆ: 58 ವಾರ್ಡ್,519 ನಾಮಪತ್ರ, ಮುಂಚೂಣಿಯಲ್ಲಿ ಬಿಜೆಪಿ 

ಬೆಳಗಾವಿ ಪಾಲಿಕೆ ಚುನಾವಣೆ: 58 ವಾರ್ಡ್,519 ನಾಮಪತ್ರ, ಮುಂಚೂಣಿಯಲ್ಲಿ ಬಿಜೆಪಿ 

ಬೆಳಗಾವಿ ಮಹಾನಗರ ಪಾಲಿಕೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ  ಸೋಮವಾರ ಒಂದೇ ದಿನ  ದಾಖಲೆಯ 434 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಿಂದ  ಒಟ್ಟು 519 ನಾಮಪತ್ರ ಸಲ್ಲಿಕೆಯಾದಂತಾಗಿದ್ದು, ಚುನಾವಣೆ ಕಣ ಕುತೂಹಲ ಕೆರಳಿಸಿದೆ‌. ಕಾಂಗ್ರೆಸ್ 49 ನಾಮಪತ್ರ, ಬಿಜೆಪಿ 58, ಜೆಡಿಎಸ್ 12 ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಎಲ್ಲ ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಂತಿದೆ.

ಹಿಂದೆ ಎಂದೂ ಈ ಪ್ರಮಾಣದಲ್ಲಿ ನಾಮಪತ್ರ ಸಲ್ಲಿಕೆ ನಡೆದಿರಲಿಲ್ಲ ಎಂದು ರಾಜಕೀಯ ಪಕ್ಷಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಈ ಬಾರಿ ಪಕ್ಷದ ಚಿಹ್ನೆ ಮೇಲೆ ಚುನಾವಣೆ ಎದುರಿಸಲು ಪ್ರಮುಖ ರಾಜಕೀಯ ಪಕ್ಷಗಳು ನಿರ್ಧರಿಸಿ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕಿಳಿಸಿವೆ. ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ,ಜೆಡಿಎಸ್, ಎಂಇಎಸ್, ಓವೈಸಿ ನೇತೃತ್ವದ ಪಕ್ಷ ಚುನಾವಣೆ ಕಣದಲ್ಲಿವೆ.
 ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂದಕ್ಜೆ ಪಡೆಯಲು ಗುರುವಾರದವರೆಗೆ  ಅವಕಾಶ ಇರಲಿದೆ. ಅಂತಿಮ ಕಣದಲ್ಲಿ ಅಭ್ಯರ್ಥಿಗಳ ಸಂಖ್ಯೆ 500 ರ ಗಡಿಯಲ್ಲಿ ಇರುವ ನಿರೀಕ್ಷೆ ಇದೆ.
ಯಾವ ವಾರ್ಡಿನಲ್ಲಿ ಎಷ್ಟು ನಾಮಪತ್ರ ಸಲ್ಲಿಕೆಯಾಗಿವೆ ಎಂಬ ಸಮಗ್ರ ವಿವರಗಳೂ ಇಲ್ಲಿವೆ.