ಬೆಳಗಾವಿ ಪಾಲಿಕೆ ಚುನಾವಣೆ: 134 ನಾಮಪತ್ರ ವಾಪಸ್, 385 ಅಭ್ಯರ್ಥಿಗಳು ಕಣದಲ್ಲಿ 

ಬೆಳಗಾವಿ ಪಾಲಿಕೆ ಚುನಾವಣೆ: 134 ನಾಮಪತ್ರ ವಾಪಸ್, 385 ಅಭ್ಯರ್ಥಿಗಳು ಕಣದಲ್ಲಿ 

ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳ ಚುನಾವಣೆಗೆ ಸಲ್ಲಿಕೆಯಾಗಿದ್ದ 519 ನಾಮಪತ್ರಗಳ ಪೈಕಿ ಗುರುವಾರ ಒಟ್ಟು 134 ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲಾಗಿದ್ದು, ಅಂತಿಮ ಕಣದಲ್ಲಿ 385 ಅಭ್ಯರ್ಥಿಗಳು ಉಳಿದಿದ್ದಾರೆ. 

ಇದರಲ್ಲಿ  ಬಿಜೆಪಿ 55, ಕಾಂಗ್ರೆಸ್ 45, ಜೆಡಿಎಸ್ 11, ಆಮ್ ಆದ್ಮಿ 27, ಎಐಎಂಐಎಂ 7, ಉತ್ತಮ ಪ್ರಜಾಕೀಯ ಪಾರ್ಟಿ 1, ಎಸ್ ಡಿ ಪಿಐ 1 ಮತ್ತು ಪಕ್ಷೇತರರಾಗಿ 238 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಬಾರಿ ದಾಖಲೆಯ 364 ಅಭ್ಯರ್ಥಿಗಳು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 126 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ.
ಬಿಜೆಪಿ ಎಲ್ಲ 58 ವಾರ್ಡ್ ಗಳಲ್ಲಿ ಸ್ಪರ್ಧೆಗೆ ಇಳಿದಿತ್ತು.ಇದರಲ್ಲಿ ಮೂವರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಉಳಿದಂತೆ ಆಮ್ ಆದ್ಮಿಯ ಒಬ್ಬರು, ಜೆಡಿಎಸ್ ನ ಮೂವರು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ