ಖಾನಾಪೂರ ಭೂಮಾಪನ ಕಚೇರಿಯ ಕೇಸ್ ವರ್ಕರ್ ಎಸಿಬಿ ಬಲೆಗೆ 

ಖಾನಾಪೂರ ಭೂಮಾಪನ ಕಚೇರಿಯ ಕೇಸ್ ವರ್ಕರ್ ಎಸಿಬಿ ಬಲೆಗೆ 
ಬೆಳಗಾವಿ: ಖಾನಾಪೂರ ಭೂಮಾಪನ ಕಚೇರಿಯ ಕೇಸ್ ವರ್ಕರ್ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಕೇಸ್ ವರ್ಕರ್ ಅಶೋಕ ಮಡವಾಲ ರೂ.6 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅದೇ ತಾಲೂಕಿನ ಸುರಾಪುರ‌ ಗ್ರಾಮದ ಶಶಿಕಾಂತ‌ ತಳವಾರ ಎನ್ನುವವರು ದೂರು ನೀಡಿದ್ದರು.
ಎಸಿಬಿ ಎಸ್ ಪಿ ಬಿ.ಎಸ್.ನ್ಯಾಮಗೌಡರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕರುಣಾಕರ ಶೆಟ್ಟಿ, ಇನ್ಸ್ಪೆಕ್ಟರ್ ಗಳಾದ ಸುನೀಲ್ ಕುಮಾರ್, ಎ.ಎಸ್.ಬುದಿಗೊಪ್ಪ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದ್ದು ತನಿಖೆ ಮುಂದುವರಿದಿದೆ.