ಮೊದಲ‌ ಭೇಟಿಯಲ್ಲಿ ಬೆಳಗಾವಿ ಜಿಲ್ಲೆಗೆ ಹಲವಾರು ಕೊಡುಗೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಮೊದಲ‌ ಭೇಟಿಯಲ್ಲಿ ಬೆಳಗಾವಿ ಜಿಲ್ಲೆಗೆ ಹಲವಾರು ಕೊಡುಗೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 
ಮೊದಲ‌ ಭೇಟಿಯಲ್ಲಿ ಬೆಳಗಾವಿ ಜಿಲ್ಲೆಗೆ ಹಲವಾರು ಕೊಡುಗೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 
*  ಕೋವಿಡ್ ನಿರ್ವಹಣೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಸ್ಪತ್ರೆ, ಆಕ್ಸಿಜನ್, ಔಷಧಿ ಮತ್ತಿತ್ತರ ವ್ಯವಸ್ಥೆ ಮಾಡಲಾಗಿದೆ. ಗಡಿ‌ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ.
* ಕೋವಿಡ್ ನಿಯಂತ್ರಣದಲ್ಲಿ ಸರಕಾರ ಯಶಸ್ವಿಯಾಗಿದೆ. ಬೆಳಗಾವಿ ಪಾಸಿಟಿವಿಟಿ ದರ ಕಡಿಮೆಯಾಗಿದೆ.
* ಹತ್ತು ಕಡೆ ಆಕ್ಸಿಜನ್ ‌ಉತ್ಪಾದನಾ ಘಟಕ ಸ್ಥಾಪನೆಗೆ ತೀರ್ಮಾನ. ಗೋಕಾಕ, ಚಿಕ್ಕೋಡಿ, ಸವದತ್ತಿ, ಬೆಳಗಾವಿ ಮತ್ತಿತರ ಕಡೆಗಳಲ್ಲಿ ಸ್ಥಾಪಿಸಲಾಗುತ್ತಿದೆ.
* ಇಪ್ಪತ್ತು ದಿನಗಳಲ್ಲಿ ಎಲ್ಲ ಆಕ್ಸಿಜನ್ ಘಟಕಗಳು ಸಿದ್ಧಪಡಿಸಲಾಗುವುದು. 
* ಚಿಕ್ಕೋಡಿ ಆರ್.ಟ.-ಪಿಸಿಆರ್ ಪರೀಕ್ಷಾ ಕೇಂದ್ರ ಸ್ಥಾಪನೆ. ಇಂದು ಉದ್ಘಾಟಿಸಲಾಗಿದೆ.
* ಗೋಕಾಕ ಕೋವಿಡ್ ಪರೀಕ್ಷಾ ಕೇಂದ್ರ  ಸ್ಥಾಪನೆಗೆ ಮಂಜೂರಾತಿ ನೀಡಲಾಗುವುದು.
* ಹೊಸ ಐದು‌ ತಾಲ್ಲೂಕು ಆಸ್ಪತ್ರೆಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗುವುದು.
* ಬೆಳಗಾವಿ ಜಿಲ್ಲೆಗೆ ಪ್ರತಿದಿನ 15 ಸಾವಿರ ಹೆಚ್ಚುವರಿ ಲಸಿಕೆ ಪೂರೈಸಿ ಪ್ರತಿದಿನ 40 ಸಾವಿರ ಲಸಿಕೆ ನೀಡಲು ಕ್ರಮ
* ಕೇಂದ್ರದಿಂದ ಒಂದು ಕೋಟಿ‌ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ.
* ಲಸಿಕಾಕರಣ ಗುರಿಸಾಧನೆಗೆ ಅಗತ್ಯ ಕ್ರಮ. 
* ಗಡಿ ಗ್ರಾಮಗಳಿಗೆ ಆದ್ಯತೆ ಮೇರೆಗೆ ಲಸಿಕೆಗೆ ಸೂಚನೆ ನೀಡಲಾಗಿದೆ.
* ಪ್ರತಿ ಗ್ರಾಮ ಗಳಲ್ಲಿ ಮಕ್ಕಳ ಅರೋಗ್ಯ ಶಿಬಿರ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ. ‌ಪೌಷ್ಟಿಕಾಹಾರ ಪೂರೈಕೆಗೆ ಕ್ರಮ.
* ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಕ್ರಮ. ಜಿಲ್ಲೆಯಾದ್ಯಂತ ಆರೋಗ್ಯ ಶಿಬಿರ.
* ಪ್ರವಾಹ
* ನೆರೆಹಾನಿ ಸಮೀಕ್ಷೆ ನಡೆದಿದೆ. ಬೆಳೆ ಹಾಗೂ ಮನೆಹಾನಿ ಸಮೀಕ್ಷೆ ಗೊಂದಲ ನಿವಾರಣೆಗೆ ಕ್ರಮ. ಪಂಚಾಯಿತಿ ಮಟ್ಟದಲ್ಲಿ ಮನೆಹಾನಿ ಕುರಿತು ಪಟ್ಟಿ ಪ್ರಕಟ; ಆಕ್ಷೇಪಣೆ ಆಹ್ವಾನ.
* ಕಳೆದ ಬಾರಿ ಪ್ರವಾಹದಿಂದ ಹಾನಿ. ಅಂತಹವರಿಗೂ ಸೂಕ್ತ ಪರಿಹಾರ ಒದಗಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತ್ಯೇಕ ಪಟ್ಟಿ ಸಿದ್ಧಪಡಿಸಲು ನಿರ್ದೇಶನ‌ ನೀಡಲಾಗಿದೆ. 
* ಸುವರ್ಣ ಸೌಧ ಆಡಳಿತದ ಶಕ್ತಿ ಕೇಂದ್ರ ಬದ್ಧ.
*ಡಿಸೆಂಬರ್ ನಲ್ಲಿ ಚಳಿಗಾಲ ಅಧಿವೇಶನ ನಡೆಸಲು ಕ್ರಮ.
* ಸಕ್ಕರೆ ಆಯುಕ್ತಾಲಯ ಬೆಳಗಾವಿಗೆ ಸ್ಥಳಾಂತರಕ್ಕೆ ಆದೇಶ ನೀಡಲಾಗುವುದು.
* ಮಹತ್ವದ ಸರಕಾರಿ ಕಚೇರಿ ಸುವರ್ಣ ಸೌಧಕ್ಕೆ ಸ್ಥಳಾಂತರಕ್ಕೆ ಅಗತ್ಯ ಕ್ರಮ.
* ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ. ನಿಯಮ‌ ಉಲ್ಲಂಘಿಸಿದರೆ‌ ಅಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ.
* ಬ್ಲ್ಯಾಕ್ ‌ಫಂಗಸ್ ಸೋಂಕಿತರು ಮನೆಗೆ ತೆರಳಿದ ಬಳಿಕವೂ ವಯಲ್ ಗಳನ್ನು ಪೂರೈಸಲು ಸರಕಾರ ‌ನಿರ್ಧಾರ.
* ಬಿಮ್ಸ್ ಮೂಲಸೌಕರ್ಯ ‌ಒದಗಿಸಲು ತಂಡವನ್ನು ಕಳಿಸಲಾಗುವುದು.