ಆಪರೇಷನ್ ‌ಕಮಲಕ್ಕೆ ಬಿಜೆಪಿ‌ ಹಣದ‌ ಆಫರ್‌ ಕೊಟ್ಟಿತ್ತು, ನಾನು‌ ಉತ್ತಮ‌ ಖಾತೆ ಕೇಳಿದೆ; ಸ್ಫೋಟಕ‌ ಮಾಹಿತಿ‌ ಸಿಡಿಸಿದ‌ ಶ್ರೀಮಂತ ಪಾಟೀಲ

ಆಪರೇಷನ್ ‌ಕಮಲಕ್ಕೆ ಬಿಜೆಪಿ‌ ಹಣದ‌ ಆಫರ್‌ ಕೊಟ್ಟಿತ್ತು, ನಾನು‌ ಉತ್ತಮ‌ ಖಾತೆ ಕೇಳಿದೆ; ಸ್ಫೋಟಕ‌ ಮಾಹಿತಿ‌ ಸಿಡಿಸಿದ‌ ಶ್ರೀಮಂತ ಪಾಟೀಲ

 
 

ಚಿಕ್ಕೋಡಿ: "ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಲು ಕೇಳಿದಷ್ಟು ಹಣ ನೀಡುವ ಆಫರ್ ಬಿಜೆಪಿ‌ ನನಗೆ ಕೊಟ್ಟಿತ್ತು. ಆದರೆ ನಾನು ಹಣ ಪಡೆಯದೆ‌ ಒಳ್ಳೆಯ ‌ಸ್ಥಾನಮಾನಕ್ಕಾಗಿ ಬೇಡಿಕೆ‌ ಇಟ್ಟಿದ್ದೆ" ಎಂದು‌ ಮಾಜಿ ಸಚಿವ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸ್ಫೋಟಕ ಹೇಳಿಕೆ ನೀಡಿದ್ದಾರೆ.

 
 
 
 
ಕಾಗವಾಡ ತಾಲೂಕಿನ ಐನಾಪೂರ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಬಿಜೆಪಿ‌ ಸೇರಲು ಬಿಜೆಪಿ ಹಣದ ಆಫರ್ ಕೊಟ್ಟಿದ್ದು ನಿಜ‌ ಎಂದು ಒಪ್ಪಿಕೊಂಡರು. ಆದರೆ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡುವದಕ್ಕೋಸ್ಕರ ನಾನು ಉತ್ತಮ‌ ಸಚಿವ ಖಾತೆಯ ಬೇಡಿಕೆ ಇಟ್ಟಿದ್ದೆ ಎಂದು ಹೇಳುವ ಮೂಲಕ ಅವರು ಬಾಂಬ್ ಸಿಡಿಸಿದರು.
 
 
 
 
ಬೊಮ್ಮಾಯಿ‌ ಸಚಿವ ಸಂಪುಟದಲ್ಲಿ ಶ್ರೀಮಂತ ಪಾಟೀಲ ಅವರನ್ನು ಕೈಬಿಡಲಾಗಿದೆ. ಹಾಗೆ ಮಾಡಿದ್ದಕ್ಕೆ ಮರಾಠಾ ಸಮಾಜ ಮುನಿಸಿಕೊಂಡು ಪ್ರತಿಭಟನೆಯನ್ನೂ ನಡೆಸಿದೆ. ಈ ಕುರಿತಂತೆ ‌ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಹಿರಿಯ ನಾಯಕರೊಂದಿಗೆ‌ ಚರ್ಚೆ ನಡೆಸಿದ್ದೇನೆ. ಮುಂದಿನ‌ ದಿನಗಳಲ್ಲಿ‌ ಸಚಿವ ಸ್ಥಾನ‌ ಮರಳಿ‌ ಕೊಡುವ ಭರವಸೆ ಇದೆ‌ ಎಂದು ಅವರು ಆಶಾಭಾವನೆ‌ ವ್ಯಕ್ತಪಡಿಸಿದರು.