ಕೊರೊನಾ ರೂಲ್ಸ್ ಬ್ರೆಕ್; ವಿನಯ ಕುಲಕರ್ಣಿ ಸೇರಿದಂತೆ 300 ಮಂದಿ ವಿರುದ್ಧ ಪ್ರಕರಣ ದಾಖಲು

ಕೊರೊನಾ ರೂಲ್ಸ್ ಬ್ರೆಕ್; ವಿನಯ ಕುಲಕರ್ಣಿ ಸೇರಿದಂತೆ 300 ಮಂದಿ ವಿರುದ್ಧ ಪ್ರಕರಣ ದಾಖಲು
 
 
ಬೆಳಗಾವಿ: ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ನಗರದಲ್ಲಿ ‌ರೋಡ್ ಶೋ ನಡೆಸಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಮತ್ತು ಅವರ 300 ಬೆಂಬಲಿಗರ ಮೇಲೆ ಪ್ರಕರಣ ದಾಖಲಾಗಿದೆ.
 
ವಿನಯ ಕುಲಕರ್ಣಿ ಅವರು ಒಂಭತ್ತು ತಿಂಗಳ ನಂತರ ‌ಹಿಂಡಲಗಾ ಜೈಲಿನಿಂದ ಹೊರ ಬಂದ ಖುಷಿಯಲ್ಲಿ ಬೆಂಬಲಿಗರು ಕೊರೊನಾ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದನ್ನು ಮರೆತು, ಹಿಂಡಲಗಾ ಜೈಲಿನಿಂದ ಗಣಪತಿ ‌ದೇವಸ್ಥಾನದ ವರೆಗೆ ಇಂದು ಮುಂಜಾನೆ ರೋಡ್ ಶೋ ನಡೆಸಿದ್ದರು. ಅವರ ಮೇಲೆ ಹೂವಿನ ಮಳೆ ಸುರಿಸಿ ಸಂಭ್ರಮಿಸಿದ್ದರು.
 
ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ವಿನಯ ಕುಲಕರ್ಣಿ ಸೇರಿದಂತೆ ಅವರ 300 ಬೆಂಬಲಿಗರ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.
 
ಇದಲ್ಲದೆ ಹಿಂಡಲಗಾ ಗ್ರಾಮ ಪಂಚಾಯತಿ ಪಿಡಿಓ‌ ಕೂಡ ಪ್ರತ್ಯೇಕವಾಗಿ ಬೆಳಗಾವಿ ಗ್ರಾಮೀಣ ಪೊಲೀಸ್ ಭಾಷೆಯಲ್ಲಿ ‌ವಿನಯ ಕುಲಕರ್ಣಿ ವಿರುದ್ಧ ದೂರು ನೀಡಿದ್ದಾರೆ.