ಬೆಳಗಾವಿಯಲ್ಲಿ ಶಿಕ್ಷಕರ ವರ್ಗಾವಣೆ: ಜೇಷ್ಠತಾ ಪಟ್ಟಿ ಕುರಿತಂತೆ ನಗರ ಘಟಕದ ಶಿಕ್ಷಕರ ಸಂಘದ ಆಕ್ಷೇಪ

ಬೆಳಗಾವಿಯಲ್ಲಿ ಶಿಕ್ಷಕರ ವರ್ಗಾವಣೆ: ಜೇಷ್ಠತಾ ಪಟ್ಟಿ ಕುರಿತಂತೆ ನಗರ ಘಟಕದ ಶಿಕ್ಷಕರ ಸಂಘದ ಆಕ್ಷೇಪ

 

 

ಬೆಳಗಾವಿ: ಆಗಷ್ಟ 31, 2021 ರಂದು ಹೆಚ್ಚುವರಿ/ ಕಡ್ಡಾಯ ವರ್ಗಾವಣೆಯಾದ ಶಿಕ್ಷಕರ ಸೇವಾ ಹಿರಿತನ ಮತ್ತು ಸೇವಾ ಅಂಕಗಳ ಅನುಸಾರ ಜೇಷ್ಠತಾ ಪಟ್ಟಿ ಪ್ರಕಟಿಸದಿರುವುದಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ನಗರ ಘಟಕ ಆಕ್ಷೇಪವೆತ್ತಿದೆ. ವರ್ಗಾವಣೆಯಾದವರ ತಾತ್ಕಾಲಿಕ ಜೇಷ್ಠತಾ/ ಆದ್ಯತಾ ಪಟ್ಟಿಯನ್ನು ಮಾತ್ರ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿಯ ಉಪನಿರ್ದೇಶಕರು ಈ ಬಾರಿ ಪ್ರಕಟಿಸಿದ್ದಾರೆ.

 

 

ಕಳೆದ ಸಾಲಿನಲ್ಲಿ ಕಡ್ಡಾಯ ವರ್ಗಾವಣೆ ಮಾಡುವ ಮೊದಲು ಕಡ್ಡಾಯ ವರ್ಗಾವಣೆಯಾಗುವ ಜಿಲ್ಲೆಯ ಎಲ್ಲಾ ಶಿಕ್ಷಕರ ಜೇಷ್ಠತಾ / ಆದ್ಯತಾ ಪಟ್ಟಿ ಪ್ರಕಟಿಸಲಾಗಿತ್ತು. ತದನಂತರ ಕಡ್ಡಾಯದವರ ಡೀಮ್ಡ್ ಹುದ್ದೆ ಭರ್ತಿಯಾಗಿದ್ದರೆ ‘A’ ಪಟ್ಟಿಯಲ್ಲಿ ಸೇರಿಸಿ ಮೊದಲ ಹಂತದ ಕೌನ್ಸಿಲಿಂಗ್ ಮತ್ತು ಕಡ್ಡಾಯದವರ ಡೀಮ್ಡ್ ಹುದ್ದೆ ಭರ್ತಿಯಾಗದೇ ಇದ್ದಲ್ಲಿ ಅವರನ್ನು ‘B’ ಪಟ್ಟಿಗೆ ಸೇರಿಸಿ ಎರಡನೇ ಹಂತದ ಕೌನ್ಸಿಲಿಂಗ್ ಮಾಡಲಾಗಿತ್ತು. ಆ ಕಾರಣದಿಂದ ಜೇಷ್ಠತಾ / ಆದ್ಯತಾ ಪಟ್ಟಿಯಲ್ಲಿ ಬಹಳಷ್ಟು ವ್ಯತ್ಯಾಸಗಳು ಉಂಟಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿತ್ತು.

 

 

ಪ್ರಸ್ತುತ ವರ್ಷದ ವಿಶೇಷ ವರ್ಗಾವಣೆಯಲ್ಲಿ 2019- 20 ನೇ ಸಾಲಿನ ಪಟ್ಟಿಯಂತೆಯೇ ಜೇಷ್ಠತಾ / ಆದ್ಯತಾ ಪಟ್ಟಿ ಪ್ರಕಟಿಸಲು ಮಾರ್ಗಸೂಚಿ ಇದೆ. ಆದ್ದರಿಂದ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸಿ ಕಳೆದ ಸಾಲಿನ ‘A’ ಮತ್ತು ‘B’ ಪಟ್ಟಿ ಎರಡನ್ನೂ ಸೇರಿಸಿ ಈ ವರ್ಷದ ಕಡ್ಡಾಯದವರ ಜೇಷ್ಠತಾ / ಆದ್ಯತಾ ಪಟ್ಟಿಯನ್ನು ಪ್ರಕಟಿಸಬೇಕು. ಆ ಮೂಲಕ ಜೇಷ್ಠತಾ ಪಟ್ಟಿಯಲ್ಲಿ ಅನ್ಯಾಯಕ್ಕೆ ಒಳಪಟ್ಟಿರುವ ಶಿಕ್ಷಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸಂಘದ ಅಧ್ಯಕ್ಷ ಬಿ.ಬಿ.ಸೊಗಲನ್ನವರ ಅವರು ಉಪನಿರ್ದೇಶಕರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.