ಬೆಳಗಾವಿ ಮಹಾನಗರ ಪಾಲಿಕೆ: ಬಿಜೆಪಿಯ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಳಗಾವಿ ಮಹಾನಗರ ಪಾಲಿಕೆ: ಬಿಜೆಪಿಯ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಳಗಾವಿ: ನಿರೀಕ್ಷೆಯಂತೆ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಪಟ್ಟಂತೆ ಬಿಜೆಪಿ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಚುನಾವಣಾ ಪ್ರಭಾರಿ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಇಂದು ಸಂಜೆ ಬಿಡುಗಡೆ ಮಾಡಿದರು. 


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿ ದಕ್ಷಿಣ ಹಾಗೂ ಉತ್ತರ ಎರಡೂ ಕ್ಷೇತ್ರಗಳಿಂದ ಸುಮಾರು 250ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಎಲ್ಲರ ಸಂದರ್ಶನ ಮಾಡಿ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿ ಆಯ್ಕೆ ಮಾಡಿದ್ದೇವೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ 45 ಸ್ಥಾನಗಳನ್ನು ಗೆದ್ದುಕೊಂಡು ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಅಭಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.


ಅಭ್ಯರ್ಥಿಗಳು ಈ ಕೆಳಗಿನಂತಿದ್ದಾರೆ:
ವಾರ್ಡ್ 1- ಉಷಾ ಸತೀಶ ಚೌಹಾಣ, ವಾರ್ಡ್ 6- ಸಂತೋಷ ಪೆಡನೆಕರ, ವಾರ್ಡ್ 13- ನಾಗವೇಣಿ ಶಿಂಧೆ, ವಾರ್ಡ್ 14- ನಿಖಿಲ ಮುರ್ಕಟೆ, ವಾರ್ಡ್ 20- ಲತಾ ಪಾಟೀಲ, ವಾರ್ಡ್ 26- ರೇಖಾ ಮೋಹನ ಹೂಗಾರ, ವಾರ್ಡ್ 31- ವೀಣಾ ಶ್ರೀಶೈಲ ವಿಜಯಪುರೆ, ವಾರ್ಡ್ 35- ಲಕ್ಷ್ಮೀ ರಾಠೋಡ, ವಾರ್ಡ್ 36- ರಣಜೀತ ಕಲಾಲ, ವಾರ್ಡ್ 45- ರೂಪಾ ಚಿಕ್ಕಲದಿನ್ನಿ, ವಾರ್ಡ್ 48- ಡಾ.ಭೂಪಾಲ ಅಲಕನೂರ, ವಾರ್ಡ್ 55- ಸವಿತಾ ಮುರಗೇಂದ್ರಗೌಡ ಪಾಟೀಲ, ವಾರ್ಡ್ 15- ನೇತ್ರಾವತಿ ವಿನೋದ ಭಗವತ, ವಾರ್ಡ್ 22- ರವಿ ಸಾಂದ್ರೇಕರ, ವಾರ್ಡ್ 23- ಜಯಂತ ಜಾಧವ, ವಾರ್ಡ್ 27- ಸಂದೀಪ ಜಾಧವ, ವಾರ್ಡ್ 29- ನಿತಿನ ಜಾಧವ, ವಾರ್ಡ್ 41- ಮಂಗೇಶ ಪವಾರ, ವಾರ್ಡ್ 50- ಸರಿತಾ ಪಾಟೀಲ, ವಾರ್ಡ್ 54- ಶ್ರೀಶೈಲ ಕಾಂಬಳೆ, ವಾರ್ಡ್ 58- ಪ್ರಿಯಾ ಅಪ್ಪಾಸಾಹೇಬ ಸಾತಗೌಡರ.