ಅಫ್ಘಾನಿಸ್ತಾನದಲ್ಲಿ ಅರಾಜಕತೆ; ಬೆಳಗಾವಿ‌ ಜಿಲ್ಲೆಯ ಬಾಳೆ ಬೆಳೆಗಾರರು ಕಂಗಾಲು

ಅಫ್ಘಾನಿಸ್ತಾನದಲ್ಲಿ ಅರಾಜಕತೆ; ಬೆಳಗಾವಿ‌ ಜಿಲ್ಲೆಯ ಬಾಳೆ ಬೆಳೆಗಾರರು ಕಂಗಾಲು

ಬೆಳಗಾವಿ; ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸದಿಂದ ಅರಾಜಕತೆ ತಾಂಡವವಾಡುತ್ತಿರುವುದಕ್ಕೆ, ಬೆಳಗಾವಿ ಜಿಲ್ಲೆಯ ಬಾಳೆ ಬೆಳೆಗಾರರು ಕಂಗಾಲಾಗಿದ್ದಾರೆ.
ಬೆಳಗಾವಿ ಜಿಲ್ಲೆ ಮತ್ತು ವಿಶೇಷವಾಗಿ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಿಂದ ನೂರಾರು ಟನ್ ಬಾಳೆ ಹಣ್ಣು ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಪ್ರತಿವರ್ಷ ರಪ್ತು ಆಗುತ್ತದೆ. ಅಫ್ಘಾನಿಸ್ತಾನದಲ್ಲಿನ ಅರಾಜಕತೆಯಿಂದ ಬಾಳೆ ಹಣ್ಣು ಬೆಳೆದಿರುವ ರೈತರು ಚಿಂತನೆಯಲ್ಲಿ ಮುಳುಗಿದ್ದಾರೆ. 
ಸಪ್ಟೆಂಬರ್ ನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ಭಾಗದಿಂದಲೇ ಸುಮಾರು 10 ಕಂಟೇನರ್ ಬಾಳೆ ಅಫ್ಘಾನಿಸ್ತಾನಕ್ಕೆ ರಫ್ತು ಆಗಬೇಕಿತ್ತು. ಜಿಲ್ಲೆಯಿಂದ 50 ಕಂಟೇನರ್ ಬಾಳೆ ಹೋಗಬೇಕಿತ್ತು. ಆದರೆ ಆ ದೇಶದಲ್ಲಿ ಉಂಟಾಗಿರುವ ಸಮಸ್ಯೆಯ ಕಾರಣದಿಂದ ಬಾಳೆ ರಫ್ತು ಮಾಡಲಿದ್ದ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿ‌ ಆಗಿದೆ.
ಇರಾನ್ ನಂತರ ಭಾರತದಿಂದ ಅತಿಹೆಚ್ಚು ಬಾಳೆ‌ ಅಫ್ಘಾನಿಸ್ತಾನಕ್ಕೆ ರವಾನೆಯಾಗುತ್ತದೆ.