ಪೆಟ್ರೋಲ್ ಕದಿಯುವಾಗ ನೋಡಿದ ಯುವಕನನ್ನು ಕೊಲೆಗೈದು ತಿಪ್ಪೆಗುಂಡಿಯಲ್ಲಿ ಶವ ಮುಚ್ಚಿ ಹಾಕಿದ ಆರೋಪಿ; ಗೋಕಾಕನಲ್ಲಿ ನಡೆದ ಘಟನೆ

ಪೆಟ್ರೋಲ್ ಕದಿಯುವಾಗ ನೋಡಿದ ಯುವಕನನ್ನು ಕೊಲೆಗೈದು ತಿಪ್ಪೆಗುಂಡಿಯಲ್ಲಿ ಶವ ಮುಚ್ಚಿ ಹಾಕಿದ ಆರೋಪಿ; ಗೋಕಾಕನಲ್ಲಿ ನಡೆದ ಘಟನೆ


ಬೆಳಗಾವಿ: ಪೆಟ್ರೋಲ್ ಕದಿಯುವಾಗ ನೋಡಿದ ಯುವಕನನ್ನು ಬರ್ಬರವಾಗಿ ಹತ್ಯೆಗೈದು, ಶವವನ್ನು ತಿಪ್ಪೆಗುಂಡಿಯಲ್ಲಿ ಹೂತಿಟ್ಟಿರುವ ಘಟನೆ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.


ಅದೇ ಗ್ರಾಮದ ಮಹಾದೇವ ಕಿಚಡಿ (28) ಕೊಲೆಯಾಗಿರುವ ಯುವಕ. ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ ಸುಣಧೋಳಿ ಎಂಬಾತನನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.


 ಆರೋಪಿಯು ಮನೆಗಳ ಮುಂದೆ ನಿಲ್ಲಿಸಿದ್ದ ವಾಹನಗಳಿಂದ ಪೆಟ್ರೋಲ್ ಕದಿಯುತ್ತಿದ್ದ ಎನ್ನಲಾಗಿದೆ. ಅದನ್ನು ಮಹಾದೇವ ಕಿಚಡಿ ನೋಡಿರುವುದು. ಆರೋಪಿ ಪ್ರವೀಣಗೆ ಗೊತ್ತಾಗಿದೆ. 


ಇನ್ನು ಊರಿನಲ್ಲಿ ‌ನನ್ನ ಮಾನ ಕಳೆಯುತ್ತಾನೆ ಎನ್ನುವ ಭಯದಿಂದ ರಾಡ್ ನಿಂದ ಹೊಡೆದು ಆತನನ್ನು ಕೊಲೆಗೈದು, ಬಳಿಕ ಶವವನ್ನು ಅಲ್ಲಿಯೇ ಒದ್ದ ತಿಪ್ಪೆಗುಂಡಿಯಲ್ಲಿ ಮುಚ್ಚಿದ್ದಾನೆ. ನಾಲ್ಕು ದಿನಗಳ ಬಳಿಕ‌ ಶವದ ವಾಸನೆ ಪಸರಿಸಿದೆ. ಗ್ರಾಮಸ್ಥರು ಬಂದು ನೋಡಲಾಗಿ ಅಲ್ಲಿ ಯುವಕನ ಶವ ಪತ್ತೆಯಾಗಿದೆ.