ಐಟಿಐ ಪಾಸ್ ಮಾಡಿಸಲು ಲಂಚ ಕೇಳಿದ್ದ ರಾಮದುರ್ಗದ ಪ್ರಾಂಶುಪಾಲ ಎಸಿಬಿ ಬಲೆಗೆ  

ಐಟಿಐ ಪಾಸ್ ಮಾಡಿಸಲು ಲಂಚ ಕೇಳಿದ್ದ ರಾಮದುರ್ಗದ ಪ್ರಾಂಶುಪಾಲ ಎಸಿಬಿ ಬಲೆಗೆ   

 

ಬೆಳಗಾವಿ: ಐಟಿಐನ ಪ್ರ್ಯಾಕ್ಟಿಕಲ್ ಪರೀಕ್ಷೆ ಪಾಸ್ ಮಾಡಿಸಲು ಲಂಚ ಪಡೆಯುತ್ತಿದ್ದ ರಾಮದುರ್ಗ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಮತ್ತು ಕಾಲೇಜಿನ ಸಿಪಾಯಿ ಒಬ್ಬನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರೆಡ್ ಹ್ಯಾಂಡ್ ಹಿಡಿದು ಬಂಧಿಸಿದ್ದಾರೆ.

 

ಪರೀಕ್ಷಾ ಕೇಂದ್ರದ ಮುಖ್ಯಸ್ಥರೂ ಆಗಿರುವ ಪ್ರಾಂಶುಪಾಲ ರಾಮನಗೌಡ ಬಾಬಾಗೌಡ ಪಾಟೀಲ ಮತ್ತು ಸಿಪಾಯಿ ಬಸವರಾಜ ರಾಮಪ್ಪ ಮೊಹಿತೆ ಬಂಧಿತ ಆರೋಪಿಗಳು. ದೂರುದಾರ ಸುಧೀರ ಸಿದ್ದನಕೊಳ್ಳ ಅವರು ನೀಡಿದ ದೂರಿನ ಅನ್ವಯ ಗುರುವಾರ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದೂರುದಾರನಿಂದ ರೂ.14,000 ಲಂಚ ಸ್ವೀಕರಿಸುವಾಗ ಆರೋಪಿಗಳನ್ನು ಬಂಧಿಸಿದರು.

 

ಎಸಿಬಿ (ಉತ್ತರ ವಲಯ) ಎಸ್ಪಿ ಬಿ.ಎಸ್.ನ್ಯಾಮಗೌಡರ ಮಾರ್ಗದರ್ಶನದಲ್ಲಿ ಹಾಗೂ ಪ್ರಭಾರಿ ಡಿವೈಎಸ್ಪಿ ಮಹಾಂತೇಶ್ವರ ಜಿದ್ದಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ ಹಾಗೂ ಸುನಿಲಕುಮಾರ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು. ಪ್ರಕರಣದಲ್ಲಿ ತನಿಖೆ ಮುಂದುವರಿದಿದೆ.