ಇಂದು ಬೆಳಗಾವಿ ಜಿಲ್ಲೆಯಲ್ಲಿ 263 ಸೋಂಕಿತರ ಪತ್ತೆ; 1 ಸಾವು

ಬೆಳಗಾವಿ: ನಿನ್ನೆ ಕಡಿಮೆ ಸೋಂಕಿತರು ಕಂಡು ಬರುವ ಮೂಲಕ ಸಮಾಧಾನ ತಂದಿದ್ದ ಕೊರೊನಾ, ಇಂದು ಮತ್ತೆ ದ್ವಿಶತಕ ದಾಟಿದ್ದು, ಜಿಲ್ಲೆಯಲ್ಲಿ ಇಂದು 263 ಮಂದಿಯಲ್ಲಿ ದೃಢಪಟ್ಟಿದೆ. ಅಲ್ಲದೆ, 41 ವರ್ಷದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 86 ಕ್ಕೆ ಏರಿಕೆಯಾಗಿದೆ.

ಬೆಳಗಾವಿ ತಾಲೂಕಿನಲ್ಲಿ 135, ಗೋಕಾಕನಲ್ಲಿ 56, ಅಥಣಿ 12, ಚಿಕ್ಕೋಡಿ 12, ಬೈಲಹೊಂಗಲ 13, ರಾಮದುರ್ಗ 6, ಹುಕ್ಕೇರಿ 11, ರಾಯಬಾಗ 3, ಖಾನಾಪುರ 4 ಮತ್ತು ಸವದತ್ತಿ ತಾಲೂಕಿನಲ್ಲಿ 3 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸಾಂಬ್ರಾದ ವಿಮಾನ ತರಬೇತಿ ಕೇಂದ್ರ (ಎಟಿಎಸ್) ನಲ್ಲಿ ಇಂದೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಬೆಳಗಾವಿ ನಗರದ ವಿರಾಟ ಗಲ್ಲಿ, ವೀರಭದ್ರ ನಗರ, ವಂಟಮುರಿ ಕಾಲನಿ, ನಾಝರ್ ಕ್ಯಾಂಪ್, ಜೀವನ್ ಹಾಸ್ಪಿಟಲ್, ಡಿಹೆಚ್ಓ ಕಚೇರಿ ಕಂಪೌಂಡ್ ಟಿಳಕವಾಡಿ, ಲಕ್ಷ್ಮೀ ನಗರ, ರೇಲ್ವೆ ಸ್ಟೇಷನ್ ಎದುರು, ಬಿಮ್ಸ್, ನ್ಯೂ ವಂಟಮುರಿ ಕಾಲನಿ, ಸಮಾದೇವಿ ಗಲ್ಲಿ, ಟಿಳಕವಾಡಿ, ಉದ್ಯಮಬಾಗ, ಉಜ್ವಲ ನಗರ, ಕೆನರಾ ಬ್ಯಾಂಕ್ ರಾಣಿ ಚೆನ್ನಮ್ಮ ನಗರ, ಶಿವಬಸವ ನಗರ, ಸದಾಶಿವ ನಗರ, ಮಹಾದ್ವಾರ ರಸ್ತೆ, ಡಿಹೆಚ್ಓ ಆಫೀಸ್ ಕ್ವಾರ್ಟರ್ಸ್, ಖಾಸಬಾಗ, ನಾರ್ವೇಕರ ಗಲ್ಲಿ, ರಾಮತೀರ್ಥ ನಗರ, ನೇತಾಜಿ ಗಲ್ಲಿ, ಸುಭಾಷ ನಗರ, ಶಹಾಪುರ, ವಡಗಾವಿ, ಹಿಂಡಲಗಾ, ಮಂಡೋಳಿ ರಸ್ತೆ, ಹಳೆಯ ಗಾಂಧಿ ನಗರ, ಲೇಕವ್ಯೂ ಆಸ್ಪತ್ರೆ, ಅಝಮ್ ನಗರ, ಮಲ್ಲಿಕಾರ್ಜುನ ನಗರ, ಚಿದಂಬರ ನಗರ, ಮಾರುತಿ ನಗರ, ಶಿವಾಜಿ ನಗರ,ಅಂಬೇಡ್ಕರ್ ನಗರ, ಶಾಹುನಗರ, ಶಾಸ್ತ್ರಿ ನಗರ ಪ್ರದೇಶಗಳಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿದೆ.

ರಾಜ್ಯದಲ್ಲಿ ಇಂದು 6,259 ಕೊರೊನಾ ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 110 ಮಂದಿ ಮೃತಪಟ್ಟಿದ್ದಾರೆ. ಅತಿಹೆಚ್ಚು 30 ಮಂದಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದರೆ, ದಕ್ಷಿಣ ಕನ್ನಡದಲ್ಲಿ 13, ಮೈಸೂರಿನಲ್ಲಿ 9 ಮತ್ತು ಧಾರವಾಡದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಇಂದಿನ ವಿಶೇಷವೆಂದರೆ ಸೋಂಕಿತರಿಗಿಂತ ಹೆಚ್ಚು ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ರಾಜ್ಯದಲ್ಲಿ ಇಂದು 6,777 ಮಂದಿ ಗುಣಮುಖರಾಗಿ ಮನೆಸೇರಿದ್ದಾರೆ.

Leave a Reply

Your email address will not be published. Required fields are marked *

You cannot copy content of this page