ಬೆಳಗಾವಿ ಜಿಲ್ಲೆಯಲ್ಲಿ ಇಂದೂ ಕೂಡ 217 ಮಂದಿ ಸೋಂಕಿತರ ಪತ್ತೆ, 5 ಸಾವು; ಇಲ್ಲಿದೆ ತಾಲೂಕುವಾರು ಡಿಟೇಲ್ಸ್

ಬೆಳಗಾವಿ: ಇಂದೂ ಕೂಡ ಜಿಲ್ಲೆಯಲ್ಲಿ 217 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಗೋಕಾಕ ಮತ್ತು ಅಥಣಿ, ಚಿಕ್ಕೋಡಿ ಮತ್ತು ಬೆಳಗಾವಿ ತಾಲೂಕಿನ ತಲಾ ಓರ್ವರು ಸೇರಿದ್ದಾರೆ.

ಜಿಲ್ಲೆಯಲ್ಲಿ ಇಂದು ದೃಢಪಟ್ಟಿರುವ ಸೋಂಕಿತರಲ್ಲಿ ಬೆಳಗಾವಿ ತಾಲೂಕಿನ 112, ಅಥಣಿಯ 9, ಸವದತ್ತಿಯ 27, ಖಾನಾಪುರದ 14, ಬೈಲಹೊಂಗಲ 11, ರಾಮದುರ್ಗ 6, ಹುಕ್ಕೇರಿ 7, ರಾಯಬಾಗದ 7, ಗೋಕಾಕದಲ್ಲಿ 8 ಮತ್ತು ಚಿಕ್ಕೋಡಿಯಲ್ಲಿ 14 ಮಂದಿ ಆಗಿದ್ದಾರೆ. ಇಂದು ಪತ್ತೆಯಾಗಿರುವ ಸೋಂಕಿತರಲ್ಲಿ ಗೋಕಾಕ ತಾಲೂಕು ಧುಪದಾಳದ 4 ವರ್ಷ ಮತ್ತು 7 ವರ್ಷ ವಯಸ್ಸಿನ ಇಬ್ಬರು ಬಾಲಕರು, ಖಾನಾಪುರದ ಪಗುರಾಂದಿಯ 2 ವರ್ಷದ ಬಾಲಕ ಮತ್ತು ಸವದತ್ತಿ ತಾಲೂಕಿ ಹೊಸೂರಿನ 1 ವರ್ಷ ವಯಸ್ಸಿನ ಬಾಲಕ ಸೇರಿದ್ದಾರೆ.

ಬೆಳಗಾವಿ ನಗರದಲ್ಲಿ ಇಂದು ಉಜ್ವಲ ನಗರ, ವೀನಸ್ ಆಸ್ಪತ್ರೆ, ನೆಹರೂ ನಗರ, ದೇಸಾಯಿ ಗಲ್ಲಿ, ರಾಣಿ ಚನ್ನಮ್ಮ ನಗರ, ಶ್ರೀನಗರ, ಮಹಾಂತೇಶ ನಗರ, ಫುಲಬಾಗ್ ಗಲ್ಲಿ, ಶಾಹು ನಗರ, ನ್ಯೂ ಗೂಡ್ ಶೆಡ್ ರೋಡ್, ಗಣೇಶಪುರ, ಅಂಜನೇಯನಗರ, ಮಿಲಿಟರಿ ಆಸ್ಪತ್ರೆ, ಆಜಾದ್ ನಗರ, ವೀರಭದ್ರ ನಗರ, ಶಹಾಪುರ, ತೆಗ್ಗಿನಗಲ್ಲಿ, ಅಂಬೇಡ್ಕರ್ ನಗರ, ಜೆಎನ್ಎಂಸಿ ಕ್ಯಾಂಪಸ್, ನ್ಯೂ ಗಾಂಧಿ ನಗರ, ಇಂದಿರಾ ನಗರ, ಟಿಳಕ ಚೌಕ್, ಸಮಾದೇವಿ ಗಲ್ಲಿ, ವಡಗಾವಿ, ಕುಂತಿ ನಗರ, ಶಹಾಪುರ, ಭಾಗ್ಯನಗರ, ನ್ಯೂ ವೈಭವ ನಗರ, ಹನುಮಾನ ನಗರ, ಬಿಚ್ಚು ಗಲ್ಲಿ, ಮಂಗಳವಾರ ಪೇಟೆ, ಬಸವ ಕಾಲನಿ, ಖಾಸಬಾಗ, ಸಹ್ಯಾದ್ರಿ ನಗರ, ವೈಭವ ನಗರ, ವಿಜಯ ನಗರ, ಅನಂತಶಯನ ಗಲ್ಲಿ, ಅಝಮ ನಗರ, ಎಸ್.ಪಿ.ಎಂ ರಸ್ತೆ, ಅನಸೂರಕರ ಗಲ್ಲಿ, ಗಣೇಶ ನಗರ, ಸುಭಾಷ ನಗರ ಮತ್ತು ಸದಾಶಿವ ನಗರ ಪ್ರದೇಶಗಳಲ್ಲಿ ಕೊರೊನಾ ಕೇಸುಗಳು ಪತ್ತೆಯಾಗಿದೆ.

ನೆಹರೂ ನಗರದಲ್ಲಿನ ಐಸಿಎಂಆರ್ ನ ಪ್ರಯೋಗಾಲಯದ 9 ಸಿಬ್ಬಂದಿಗೆ ಇಂದು ಕೊರೊನಾ ತಗುಲಿರುವುದು ವರದಿಯಿಂದ ಗೊತ್ತಾಗಿದೆ. ಸಾಂಬ್ರಾದಲ್ಲಿನ ವಿಮಾನ ತರಬೇತಿ ಕೇಂದ್ರ (ಎಟಿಎಸ್) ನಲ್ಲಿ ಇಂದೂ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಗ್ರಾಮೀಣ ಭಾಗದ ಹಿಂಡಲಗಾ, ಪಂತ ಬಾಳೇಕುಂದ್ರಿ, ಸಾಂಬ್ರಾ, ಯಳ್ಳೂರ, ನಿಲಜಿ, ಸಂತಿ ಬಸ್ತವಾಡ, ಮುಚ್ಚಂಡಿ, ಬೆನಕನಹಳ್ಳಿ, ಬಸವನಕುಡಚಿಯಲ್ಲಿಯೂ ಸೋಂಕಿತರು ದೃಢಪಟ್ಟಿದ್ದಾರೆ.

ಸವದತ್ತಿ ತಾಲೂಕು ಉಗರಗೋಳದ ಪ್ರಾಥಮಿಕ ಆರೋಗ್ಯ ಕೇಂದ್ರ, ಅಥಣಿಯ ಅಗ್ನಿಶಾಮಕ ದಳ, ಬೈಲಹೊಂಗಲದ ಪೊಲೀಸ್ ಠಾಣೆ, ಖಾನಾಪುರದ ಅರಣ್ಯ ಇಲಾಖೆ ಮತ್ತು ಬಸ್ ಡೆಪೊ ಸಿಬ್ಬಂದಿಯಲ್ಲಿ ಇಂದು ಕೊರೊನಾ ದೃಢಪಟ್ಟಿದೆ.

ರಾಜ್ಯದಲ್ಲಿ ಇಂದು 5,483 ಮಂದಿ ಕೊರೊನಾ ಬಾಧಿತರಾಗಿದ್ದು, 3,130 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಮೃತಪಟ್ಟವರ ಸಂಖ್ಯೆ 84 ಆಗಿದೆ. ಮೃತಪಟ್ಟವರಲ್ಲಿ 20 ಮಂದಿ ಬೆಂಗಳೂರಿಗರಾಗಿದ್ದರೆ 10 ಮಂದಿ ದಕ್ಷಿಣ ಕನ್ನಡಕ್ಕೆ ಸೇರಿದವರಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿಯೂ ಇಂದು 88 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ.

Leave a Reply

Your email address will not be published. Required fields are marked *

You cannot copy content of this page